ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿ ದಾಟುತ್ತಿದ್ದಾಗ ಮೊಸಳೆ ದಾಳಿ: ಸಿನಿಮೀಯ ರೀತಿಯಲ್ಲಿ ಪಾರಾದ ಬಿಹಾರದ ರೈತ

Last Updated 31 ಮೇ 2022, 9:38 IST
ಅಕ್ಷರ ಗಾತ್ರ

ಪಟ್ನಾ: ತನ್ನ ಮೇಲೆ ದಾಳಿ ಮಾಡಿ, ತಿನ್ನಲು ಬಂದಮೊಸಳೆಯೊಂದಿಗೆ ಸೆಣಸಾಡಿದ ರೈತನೊಬ್ಬ, ಸಿನಿಮೀಯ ರೀತಿಯಲ್ಲಿ ಬದುಕುಳಿದಿರುವ ಘಟನೆಬಿಹಾರದ ಪಶ್ಚಿಮ ಚಂಪಾರಣ್‌ ಜಿಲ್ಲೆಯಲ್ಲಿ ವರದಿಯಾಗಿದೆ.

ಪಾರಾಗಿ ಬಂದ ರೈತನನ್ನು ಪರ್ಮ ಮುಷಾಹರ್‌ ಎನ್ನಲಾಗಿದ್ದು, ಅವರುಸೋಮವಾರ ಸಂಜೆ 'ಬಗಹ' ಪಟ್ಟಣದ ಬಳಿ 'ಹರ್ಷ' ನದಿ ದಾಟುತ್ತಿದ್ದ ವೇಳೆ ಸುಮಾರು 10 ಅಡಿ ಉದ್ದದ ಮೊಸಳೆ ದಾಳಿ ಮಾಡಿದೆ.

ಜಮುನಾಪುರ್ ಗ್ರಾಮದ ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪರ್ಮ ಹೇಳಿಕೆ ನೀಡಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಪರ್ಮ,'ಊರಿಗೆ ತಲುಪಲು ನಾನು ನದಿ ದಾಟಬೇಕಾಗಿತ್ತು. ಹಳ್ಳಿಯವರು ಓಡಾಡಲು ಸಾಮಾನ್ಯವಾಗಿ ಇದೇ ಮಾರ್ಗವನ್ನು ಬಳಸುತ್ತಾರೆ. ನಾನೂ ಈ ಹಿಂದೆ ಅದೇ ದಾರಿಯಲ್ಲಿ ಹೋಗಿಬರುತ್ತಿದ್ದೆ' ಎಂದು ಹೇಳಿದ್ದಾರೆ.

'ನದಿಯ ಮಧ್ಯಕ್ಕೆ ತಲುಪುತ್ತಿದ್ದಂತೆ, ಕಾಲಿನಲ್ಲಿ ತೀವ್ರವಾದ ನೋವು ಕಾಣಿಡಿಕೊಂಡಿತು. ಹಿಂತಿರುಗಿ ನೋಡಿದಾಗ ಮೊಸಳೆ ನನ್ನ ಕಾಲನ್ನು ಕಚ್ಚಿರುವುದು ಕಂಡಿತು. ನದಿ ದಾಟುವುದಕ್ಕೆ ಹಿಡಿದುಕೊಂಡಿದ್ದ ದೊಣ್ಣೆಯಿಂದ ಮೊಸಳೆಯ ತಲೆ ಮೇಲೆ ನಿರಂತರವಾಗಿ ಹಲ್ಲೆ ಮಾಡಿದೆ. ಅದು ಕಾಲನ್ನು ಬಿಡುವವರೆಗೂ ಹೊಡೆದೆ. ಅಷ್ಟರಲ್ಲಾಗಲೇ ಕಾಲಿನ ಸ್ವಲ್ಪ ಭಾಗವನ್ನು ತಿಂದಿತ್ತು. ನಂತರ ಕೂಡಲೇ ದಂಡೆಯತ್ತ ಓಡಿದೆ. ಸಹಾಯಕ್ಕಾಗಿಕೂಗಿಕೊಂಡೆ' ಎಂದು ಮೊಸಳೆಯಿಂದ ಪಾರಾಗಿ ಬಂದ ಅನುಭವ ಹಂಚಿಕೊಂಡಿದ್ದಾರೆ.

'ನದಿಯಲ್ಲಿ ಸ್ವಲ್ಪವೇ ನೀರು ಇದ್ದದ್ದರಿಂದ ಬದುಕುಳಿಯಲು ಸಾಧ್ಯವಾಯಿತು' ಎಂದೂ ತಿಳಿಸಿದ್ದಾರೆ.

ಚೀರಾಟ ಕೇಳಿ ನೆರವಿಗೆ ಧಾವಿಸಿದ ಗ್ರಾಮಸ್ಥರುಪರ್ಮ ಅವರನ್ನು ತಕ್ಷಣವೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಪರ್ಮ ಅವರ ಸ್ಥಿತಿ ಗಂಭಿರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಗಹದಲ್ಲಿರುವ ಸಬ್‌–ಡಿವಿಷನಲ್‌ ಆಸ್ಪತ್ರೆಗೆ ಕರೆದೊಯ್ಯಲುವೈದ್ಯರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT