ಕೊಚ್ಚಿ: ವೈಯಕ್ತಿಕ ಬಳಕೆಗಾಗಿ, ಯುಎಇ ಕಾನ್ಸುಲೇಟ್ ಅಧಿಕಾರಿಗಳು ರಾಜತಾಂತ್ರಿಕ ಮಾರ್ಗದ ಮುಖಾಂತರ ಕಳುಹಿಸಿದ್ದ ಕುರಾನ್ ಗ್ರಂಥವನ್ನು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಕಸ್ಟಮ್ಸ್ ವಿಭಾಗವು ಕೇರಳದ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಅವರಿಗೆ ಸಮನ್ಸ್ ನೀಡಿದೆ.

ಸೋಮವಾರ (ನ.9) ವಿಚಾರಣೆಗೆ ಹಾಜರಾಗಲು ಕಸ್ಟಮ್ಸ್ ನೋಟಿಸ್ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕುರಾನ್ ಗ್ರಂಥದ ಆಮದು ಸೇರಿದಂತೆ ತನಿಖೆಯ ಭಾಗವಾಗಿ ಇತರೆ ವಿಷಯಗಳ ಬಗ್ಗೆಯೂ ಸಚಿವರಿಂದ ಹಲವು ಸ್ಪಷ್ಟನೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ಕೇಳಲಿದ್ದಾರೆ ಎಂದು ಮೂಲಗಳು ತಿಳಿಸಿದವು.

ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಈಗಾಗಲೇ ಜಲೀಲ್ ಅವರನ್ನು ವಿಚಾರಣೆಗೊಳಪಡಿಸಿದೆ. ಜೊತೆಗೆ, ರಾಜತಾಂತ್ರಿಕ ಮಾರ್ಗದ ದುರ್ಬಳಕೆಗೆ ಸಂಬಂಧಿಸಿದಂತೆ ವಿದೇಶ ದೇಣಿಗೆ ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ)ಉಲ್ಲಂಘನೆ ಆರೋಪದಡಿ ಜಾರಿ ನಿರ್ದೇಶನಾಲಯವೂ(ಇ.ಡಿ)ಜಲೀಲ್ ಅವರನ್ನು ಇತ್ತೀಚೆಗೆ ವಿಚಾರಣಗೊಳಪಡಿಸಿತ್ತು. ವೈಯಕ್ತಿಕ ಬಳಕೆಗಾಗಿ, ತೆರಿಗೆಯಿಂದ ವಿನಾಯಿತಿ ಪಡೆಯಲು ರಾಜತಾಂತ್ರಿಕ ಮಾರ್ಗದ ಮುಖಾಂತರ ಸರ್ಕಾರಿ ಅಧಿಕಾರಿಗಳು ಕುರಾನ್ ಗ್ರಂಥ ಹಾಗೂ 18 ಸಾವಿರ ಕೆ.ಜಿ ಖರ್ಜೂರವನ್ನು ಆಮದು ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್ ಇಲಾಖೆಯು ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.