ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ

ವಾರಾಂತ್ಯದ ವೇಳೆಗೆ ಮ್ಯಾನ್ಮಾರ್‌– ಬಾಂಗ್ಲಾದೇಶ ತಲುಪಲಿರುವ ‘ಮೋಕಾ’ ಚಂಡಮಾರುತ
Published 8 ಮೇ 2023, 16:20 IST
Last Updated 8 ಮೇ 2023, 16:20 IST
ಅಕ್ಷರ ಗಾತ್ರ

ನವದೆಹಲಿ: ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಸೋಮವಾರ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗಿದ್ದು, ಇದು ಮಂಗಳವಾರ ಸಂಜೆ ವೇಳೆಗೆ ವಾಯುಭಾರ ಕುಸಿತವಾಗಿ ಬದಲಾಗಲಿದೆ. ಬುಧವಾರ ಚಂಡಮಾರುತವಾಗಿ ರೂಪುಗೊಳ್ಳಲಿದ್ದು, ಈ ವಾರಾಂತ್ಯದ ವೇಳೆಗೆ ಬಾಂಗ್ಲಾದೇಶ, ಮ್ಯಾನ್ಮಾರ್‌ ಕರಾವಳಿ ಕಡೆಗೆ ಚಲಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಈ ಚಂಡಮಾರುತಕ್ಕೆ ‘ಮೋಕಾ’ ಎಂದು ಹೆಸರಿಡಲಾಗಿದೆ. 

ಬಂಗಾಳ ಕೊಲ್ಲಿಯ ಈಶಾನ್ಯ ಭಾಗದಲ್ಲಿ ಮೀನುಗಾರರು, ಮೀನುಗಾರ ದೋಣಿಗಳು ಮತ್ತು ಸಣ್ಣ ಗಾತ್ರದ ದೋಣಿಗಳಿಗೆ ಸಮುದ್ರಕ್ಕಿಳಿಯದಂತೆ ಮತ್ತು ಈಗಾಗಲೇ ಸಮುದ್ರಕ್ಕಿಳಿದಿರುವವರಿಗೆ ತೀರಕ್ಕೆ ಮರಳುವಂತೆ ಭಾರತೀಯ ಹವಾಮಾನ ಇಲಾಖೆ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಮುನ್ನೆಚ್ಚರಿಕೆ ನೀಡಿದ್ದಾರೆ. 

ಈ ಚಂಡಮಾರುತವು ಮೇ 11ರ ವರೆಗೆ ಬಂಗಾಳಕೊಲ್ಲಿಯ ಉತ್ತರ– ವಾಯುವ್ಯ ಭಾಗದಿಂದ ಕೇಂದ್ರ ಭಾಗಕ್ಕೆ ಚಲಿಸಲಿದೆ. ಬಳಿಕ  ಉತ್ತರ– ಈಶಾನ್ಯ ದಿಕ್ಕಿನಲ್ಲಿ ಸಾಗಿ ಬಾಂಗ್ಲಾದೇಶ, ಮ್ಯಾನ್ಮಾರ್‌ ದೇಶಗಳ ಕಡೆಗೆ ಚಲಿಸಲಿದೆ ಎಂದು ಅವರು ಹೇಳಿದ್ದಾರೆ.

ಮಂಗಳವಾರದ ವೇಳೆಗೆ ಭಾರಿ ಗಾಳಿ ಬೀಸಲಿದ್ದು, ಮಾರುತದ ವೇಗವು ಗಂಟೆಗೆ 50– 60 ಕಿಮೀ ಇರಲಿದೆ. ಇದು ಮತ್ತಷ್ಟು ವೇಗ ಪಡೆದು ಗಂಟೆಗೆ 70 ಕಿಮೀ ವೇಗದಲ್ಲಿ ಬಂಗಾಳ ಕೊಲ್ಲಿಯ ಆಗ್ನೇಯ ಭಾಗ, ಅಂಡಮಾನ್‌ ನಿಕೊಬಾರ್‌ ದ್ವೀಪ ಸಮೂಹ ಮತ್ತು ಅದಕ್ಕೆ ಹೊಂದಿಕೊಂಡಿರುವ ಅಂಡಮಾನ್‌ ಸಮುದ್ರದ ಮೇಲೆ ಬೀಸಲಿದೆ. 

ಈ ಪ್ರತಿಕೂಲ ಹವಾಮಾನದ ಕಾರಣ ಅಂಡಮಾನ್‌ ನಿಕೋಬಾರ್‌ ದ್ವೀಪದಲ್ಲಿ ಮಂಗಳವಾರ ಭಾರಿ ಮಳೆ ಬೀಳಲಿದೆ. ಶುಕ್ರವಾರದ ವರೆಗೆ ಅಂಡಮಾನ್‌ ನಿಕೋಬಾರ್‌ ದ್ವೀಪ ಸಮೂಹ ಮತ್ತು ಬಂಗಾಳ ಕೊಲ್ಲಿಯ ಆಗ್ನೇಯ, ಕೇಂದ್ರ ಭಾಗದ ಕರಾವಳಿ ತೀರದಲ್ಲಿ  ಪ್ರವಾಸೋದ್ಯಮ ಹಾಗೂ ಇತರ ಚಟುವಟಿಕೆಗಳನ್ನು ನಿಯಂತ್ರಣದಲ್ಲಿ ಇರಿಸುವಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT