ಅಮರಾವತಿ: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ‘ಮೊಂಥಾ’ ಚಂಡಮಾರುತವು ಆಂಧ್ರ, ಒಡಿಶಾದಲ್ಲಿ ವ್ಯಾಪಕ ಮಳೆ ಸುರಿಸಿದೆ.

ಆಂಧ್ರಪ್ರದೇಶದಲ್ಲಿ 338 ಮಂಡಲಗಳ 3,778 ಗ್ರಾಮಗಳಲ್ಲಿ ಬಲವಾದ ಗಾಳಿ ಸಹಿತ ಭಾರೀ ಮಳೆ ಸುರಿಸುವ ಸಾಧ್ಯತೆ ಇದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಚಂಡಮಾರುತವ ಆಂಧ್ರದ ಮಚಲಿಪಟ್ಟಣ ಮತ್ತು ಕಾಳಿಂಗಪಟ್ಟಣದ ನಡುವಿನ ಕಾಕಿನಾಡ ಬಳಿ ಮಂಗಳವಾರ ಸಂಜೆಯ ಹೊತ್ತಿಗೆ ಅಪ್ಪಳಿಸುವ ಸಾಧ್ಯತೆಗಳಿವೆ.

ರಾಜ್ಯ ಸರ್ಕಾರವು 3,174 ಪುನರ್ವಸತಿ ಕೇಂದ್ರಗಳನ್ನು ತೆರೆದಿದೆ. ಇದರಲ್ಲಿ ಪೂರ್ವ ಗೋದಾವರಿಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಕೋನಸೀಮಾ ಅತಿ ದೊಡ್ಡದು. ನೈಜ ಸಮಯದಲ್ಲಿ ಧ್ವನಿ ಆಧಾರಿತ ಮುನ್ನೆಚ್ಚರಿಕೆ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡುವ ವ್ಯವಸ್ಥೆಯನ್ನು 26 ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ. ಚಂಡಮಾರುತ ನಿರ್ವಹಣೆಗಾಗಿಯೇ 3,778 ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಮುದ್ರವು ತೀವ್ರವಾಗಿ ಪ್ರಕ್ಷುಬ್ಧವಾಗಿದ್ದು, ಅಲೆಗಳು 4,7 ಮೀಟರ್ ಎತ್ತರದವರೆಗೂ ಸಾಗಿ ದಡಕ್ಕಪ್ಪಳಿಸುತ್ತಿವೆ. ಕಾಕಿನಾಡ, ವಿಶಾಖಪಟ್ಟಣ, ಗಂಗಾವರಂ, ಮಚಲಿಪಟ್ಟಣ, ನಿಜಾಮ್ಪಟ್ಟಣಂ ಮತ್ತು ಕೃಷ್ಣಪಟ್ಟಣಂ ಬಂದರುಗಳಲ್ಲಿ ಚಂಡಮಾರುತದ ಅಬ್ಬರ ತೀವ್ರವಾಗಿದೆ ಎಂದು ವರದಿಯಾಗಿದೆ.

ವಿಶಾಖಪಟ್ಟಣದಲ್ಲಿ ಅತಿ ಹೆಚ್ಚು 12.5 ಸೆಂ.ಮೀ. ಮಳೆಯಾಗಿದೆ. ನಂತರದ ಸ್ಥಾನದಲ್ಲಿ ವಿಶಾಖಪಟ್ಟಣದ ಗ್ರಾಮೀಣ ಭಾಗದಲ್ಲಿ 12 ಸೆಂ.ಮೀ. ಮಳೆಯಾಗಿದೆ ಹಾಗೂ ಆನಂದಪುರಂನಲ್ಲಿ 11.7 ಸೆಂ.ಮೀ. ಮಳೆಯಾಗಿದೆ. ಸುಮಾರು 95 ಪ್ರದೇಶಗಳಲ್ಲಿ ಮಳೆಯಾದ ವರದಿಯಾಗಿದೆ.

ಅಲೆಗಳ ಏರಿಳಿತ ಒಂದು ಮೀಟರ್ ಹೆಚ್ಚಾದರು ತಗ್ಗಿನ ಪ್ರದೇಶಗಳಿಗೆ ನೀರು ನುಗ್ಗುವ ಅಪಾಯವಿದೆ. ಜನರಿಗೆ ಮನೆಯಲ್ಲೇ ಇರುವಂತೆ ಹಾಗೂ ಸರ್ಕಾರದ ಮುನ್ನೆಚ್ಚರಿಕೆ ಕಡೆ ಗಮನ ನೀಡುವಂತೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
.PHOTOS | Cyclone Montha: ತೀವ್ರ ಸ್ವರೂಪ ಪಡೆದ 'ಮೊಂಥಾ' ಚಂಡಮಾರುತ.ಬಂಗಾಳ ಕೊಲ್ಲಿಗೆ ಅಪ್ಪಳಿಸಲಿದೆ ಮೊಂಥಾ ಚಂಡಮಾರುತ: ಭಾರಿ ಮಳೆಯ ಮುನ್ಸೂಚನೆ.
ಒಡಿಶಾದ 8 ಜಿಲ್ಲೆಗಳಲ್ಲಿ ಹೈ ಅಲರ್ಟ್

ಒಡಿಶಾದ ದಕ್ಷಿಣ ಭಾಗದ 8 ಜಿಲ್ಲೆಗಳಲ್ಲಿ ಮೊಂಥಾ ಚಂಡಮಾರುತದಿಂದಾಗಿ ಭಾರೀ ಮಳೆಯಾಗಿದೆ.

ಮಾಲ್ಕನ್ಗಿರಿ, ಕೋರಾಟಪೂಟ್, ರಾಯಗಡ, ಗಜಪತಿ, ಗಂಜಾಂ, ನಬರಂಗ್ಪುರ, ಕಲಾಹಂಡಿ ಮತ್ತು ಕಂಧಮಲ್ನಲ್ಲಿ ವ್ಯಾಪಕ ಮಳೆಯಾಗಿದೆ.

ರಾಜ್ಯದಲ್ಲಿ ಸುಮಾರು 1,400 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ತಗ್ಗು ಪ್ರದೇಶದಲ್ಲಿರುವವರ ಸ್ಥಳಾಂತರ ತ್ವರಿತಗತಿಯಲ್ಲಿ ಸಾಗಿದೆ. ಶಾಲೆ ಹಾಗೂ ಶಿಶುವಿಹಾರಗಳಿಗೆ ಅ. 30ರವರೆಗೂ ರಜೆ ನೀಡಲಾಗಿದೆ. ಕಡಲತೀರಗಳಿಗೆ ತೆರಳದಂತೆ ನಿರ್ಬಂಧಿಸಲಾಗಿದೆ. ಅ. 29ರವರೆಗೂ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಡಿಶಾದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಮೊಂಥಾ ಚಂಡಮಾರುತದಿಂದ ಜಾರ್ಖಂಡ್ನಲ್ಲೂ ಭಾರೀ ಮಳೆ

ಬಂಗಳಾಕೊಲ್ಲಿಯಲ್ಲಿ ಎದ್ದಿರುವ ಚಂಡಮಾರುತದಿಂದ ಜಾರ್ಖಂಡ್ನಲ್ಲೂ ಅ. 31ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಸಿಮ್ದೆಗಾ, ಪಶ್ಚಿಮ ಸಿಂಗ್ಭುಮ್, ಖುಂತಿ, ಗುಮ್ಲಾದಲ್ಲಿ ಅ. 28ರವರೆಗೆ, ಛಾತ್ರಾ, ಗರ್ವಾ, ಲಟೆಹರ್, ಪಲಾಮುನಲ್ಲಿ ಅ. 29ರವರೆಗೆ ಹಾಗೂ ಅ. 30ರಿಂದ 31ರವರೆಗೆ

ಮೊಂಥಾ ಚಂಡಮಾರುತವು ಆಂಧ್ರ ತೀರದ ಕಾಕಿನಾಡ ಮೂಲಕ ಪ್ರತಿ ಗಂಟೆಗೆ 100ರಿಂದ 110 ಕಿ.ಮೀ. ವೇಗದಲ್ಲಿ ಸಾಗಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯದಲ್ಲೂ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿಯ ಚಂಡಮಾರುತಕ್ಕೆ ಥಾಯ್ಲೆಂಡ್ ನೀಡಿರುವ ‘ಮೊಂಥಾ’ ಹೆಸರನ್ನು ಇಡಲಾಗಿದೆ. ಮೊಂಥಾ ಎಂದರೆ ಸುಂದರ ಹೂವು ಅಥವಾ ಸುವಾಸನಾಭರಿತ ಹೂವು ಎಂದರ್ಥ.

ರೈಲು, ವಿಮಾನ ಹಾರಾಟ ರದ್ದು

ಚಂಡಮಾರುತದ ಎಚ್ಚರಿಕೆ ಇರುವುದರಿಂದ ಒಡಿಶಾದಲ್ಲಿ 32 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಆಂಧ್ರಪ್ರದೇಶದ ಗನ್ನಾವರಮ್ ವಿಮಾನ ನಿಲ್ದಾಣದಿಂದ ಮಂಗಳವಾರ ಹಾರಾಟ ನಡಸಬೇಕಿದ್ದ 30 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.