ಕೋಲ್ಕತ್ತ: ‘ರೀಮಲ್’ ಚಂಡಮಾರುತವು ಪಶ್ಚಿಮ ಬಂಗಾಳ ಕರಾವಳಿ ಪ್ರದೇಶವನ್ನು ತೀವ್ರವಾಗಿ ಬಾಧಿಸಿದೆ.

ಪ್ರತಿಕೂಲ ಹವಾಮಾನದಿಂದಾಗಿ ಕೋಲ್ಕತ್ತದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಎನ್‌ಎಸ್‌ಸಿಬಿಐ) ಬಂದಿಳಿಯಬೇಕಿದ್ದ 8 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಧ್ಯಾಹ್ನದಿಂದ 21 ಗಂಟೆಗಳ ಕಾಲ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಚಂಡಮಾರುತದ ತೀವ್ರತೆ ತುಸು ಕಡಿಮೆಯಾದ ಕಾರಣ ವಿಮಾನ ಸೇವೆಗಳು ಪುನರಾರಂಭಗೊಂಡಿವೆ. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ಕೋಲ್ಕತ್ತದಲ್ಲಿ ಇಳಿಯಬೇಕಿದ್ದ ಕನಿಷ್ಠ ಎಂಟು ವಿಮಾನಗಳನ್ನು ಬೇರೆ ನಗರಗಳಿಗೆ ಕಳುಹಿಸಲಾಯಿತು ಎಂದು ಅವರು ಹೇಳಿದ್ದಾರೆ.

ಇದುವರೆಗೆ ಕೋಲ್ಕತ್ತದಲ್ಲಿ ಇಳಿಯಬೇಕಿದ್ದ ಎಂಟು ವಿಮಾನಗಳನ್ನು ಗುವಾಹಟಿ, ಗಯಾ, ವಾರಾಣಸಿ ಮತ್ತು ಭುವನೇಶ್ವರ ಸೇರಿದಂತೆ ಇತರೆ ವಿಮಾನ ನಿಲ್ದಾಣಗಳಿಗೆ ಕಳುಹಿಸಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

‘ರೀಮಲ್’ ಚಂಡಮಾರುತ ಪರಿಣಾಮ ಬಿರುಗಾಳಿ ಸಹಿತ ಧಾರಾಕಾರ ಮಳೆಯಿಂದಾಗಿ ಬಾಂಗ್ಲಾದೇಶದಲ್ಲಿ 10, ಪಶ್ಚಿಮ ಬಂಗಾಳದಲ್ಲಿ 6 ಮಂದಿ ಸಾವು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
.ರೀಮಲ್ ಚಂಡಮಾರುತ: ಬಾಂಗ್ಲಾದೇಶದಲ್ಲಿ 7 ಮಂದಿ ಸಾವು.'ರೀಮಲ್' ಪರಿಣಾಮ ಸಾಧ್ಯತೆ: ಇಂದು ಮಧ್ಯಾಹ್ನದಿಂದ ಕೋಲ್ಕತ್ತ ವಿಮಾನ ನಿಲ್ದಾಣ ಬಂದ್.Cyclone Remal | ಬಾಂಗ್ಲಾದೇಶದಲ್ಲಿ 10, ಪಶ್ಚಿಮ ಬಂಗಾಳದಲ್ಲಿ 6 ಮಂದಿ ಸಾವು.Cyclone Remal |ಅಸ್ಸಾಂನಲ್ಲಿ ಭಾರಿ ಮಳೆ ಸಾಧ್ಯತೆ: 7 ಜಿಲ್ಲೆಗಳಿಗೆ ರೆಡ್ ಅಲರ್ಟ್.Cyclone Remal: ಪಶ್ಚಿಮ ಬಂಗಾಳದ ಹಲವೆಡೆ ಭಾರಿ ಮಳೆ ಆರಂಭ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.