ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ದಿನಗಳ ಅಂತರದಲ್ಲಿ ಚೀತಾದ 3 ಮರಿ ಸಾವು

Published 25 ಮೇ 2023, 11:23 IST
Last Updated 25 ಮೇ 2023, 11:23 IST
ಅಕ್ಷರ ಗಾತ್ರ

ಭೋಪಾಲ್: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೆರಡು ಚೀತಾ ಮರಿಗಳು ಮೃತಪಟ್ಟಿವೆ ಎಂದು ಅರಣ್ಯಾಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಇದರೊಂದಿಗೆ ಕಳೆದ ಮೂರು ದಿನಗಳಲ್ಲಿ ಮೃತಪಟ್ಟ ಚೀತಾ ಮರಿಗಳ ಸಂಖ್ಯೆ ಮೂರಕ್ಕೇರಿದೆ.

ಜ್ವಾಲಾ ಹೆಸರಿನ ಚೀತಾದ ಒಂದು ಮರಿ ಮೇ 23ರಂದು ಮೃತಪಟ್ಟಿತ್ತು. ಅದೇ ದಿನ ಮಧ್ಯಾಹ್ನ ಇನ್ನೆರಡು ಮರಿಗಳು ಮೃತಪಟ್ಟಿವೆ. ಆದರೆ, ಅದು ಗುರುವಾರವಷ್ಟೇ ವರದಿಯಾಗಿದೆ ಎನ್ನಲಾಗಿದೆ.

ಮೇ 23ರಂದು ಒಂದು ಮರಿ ಮೃತಪಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದೇ ದಿನ ಇನ್ನೆರಡು ಮರಿಗಳು ಮೃತಪಟ್ಟಿರುವ ವಿಷಯವನ್ನು ಮುಚ್ಚಿಟ್ಟಿದ್ದು ಏಕೆ ಎಂಬುದನ್ನು ಅಧಿಕಾರಿಗಳು ಬಹಿರಂಗ ಪಡಿಸಿಲ್ಲ.

ಮೇ 23ರಂದು ಮೊದಲ ಮರಿ ಮೃತಪಟ್ಟ ನಂತರ ಹೇಳಿಕೆ ಬಿಡುಗಡೆ ಮಾಡಿದ್ದ ಅಧಿಕಾರಿಗಳು, ತಾಯಿ ಚೀತಾ ಜ್ವಾಲಾ ಹಾಗೂ ಅದರ ಮೂರು ಮರಿಗಳ ಮೇಲೆ ನಿಗಾ ಇಟ್ಟಿರುವುದಾಗಿ ತಿಳಿಸಿದ್ದರು.

ಭಾರತದಲ್ಲಿ ಚೀತಾ ಸಂಸತಿ ಅಭಿವೃದ್ಧಿಪಡಿಸುವ ಸಲುವಾಗಿ ಯೋಜನೆ ರೂಪಿಸಲಾಗಿದೆ. ಅದರಂತೆ ಆಫ್ರಿಕಾದಿಂದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಚೀತಾಗಳನ್ನು ತಂದು ಬಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT