ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

DCW ಅಧ್ಯಕ್ಷೆ ಸ್ವಾತಿ ಮಲಿವಾಲ್‌ರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ AAP

Published 5 ಜನವರಿ 2024, 14:39 IST
Last Updated 5 ಜನವರಿ 2024, 14:39 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಅವರನ್ನು ಆಮ್ ಆದ್ಮಿ ಪಕ್ಷ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದೆ. 

ಇದೇ ವೇಳೆ ಎಎಪಿಯ ಮುಖಂಡರು ಹಾಗೂ ರಾಜ್ಯಸಭೆ ಸದಸ್ಯರಾದ ಸಂಜಯ್ ಸಿಂಗ್, ಎನ್‌.ಡಿ. ಗುಪ್ತಾ ಅವರನ್ನು ಮರುನಾಮಕರಣ ಮಾಡಿದೆ ಎಂದು ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ತಿಳಿಸಿದೆ.

ಜನವರಿ 19ರಂದು ನಡೆಯಲಿರುವ ರಾಜ್ಯಸಭೆಗೆ ಚುನಾವಣೆ ನಡೆಯಲಿದೆ. ಸ್ವಾತಿ ಮಲಿವಾಲ್ ಅವರನ್ನು ಮೊದಲ ಬಾರಿಗೆ ನಾಮನಿರ್ದೇಶನ ಮಾಡಲಾಗಿದೆ.

ಮತ್ತೊಬ್ಬ ಸದಸ್ಯರಾದ ಸುಶೀಲ್ ಕುಮಾರ್ ಅವರ ಅವಧಿ ಜನವರಿ ಅಂತ್ಯಕ್ಕೆ ಕೊನೆಯಾಗಲಿದೆ. ಅವರನ್ನು ಹರಿಯಾಣದ ಚುನಾವಣೆಯಲ್ಲಿ ಬಳಸಿಕೊಳ್ಳಲು ಎಎಪಿ ಚಿಂತಿಸಿದೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT