ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಹದಗೆಟ್ಟ ದೆಹಲಿ ಗಾಳಿಯ ಗುಣಮಟ್ಟ: 401ಕ್ಕೆ ತಲುಪಿದ AQI ಸೂಚ್ಯಂಕ

Published 24 ನವೆಂಬರ್ 2023, 10:59 IST
Last Updated 24 ನವೆಂಬರ್ 2023, 10:59 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಶುಕ್ರವಾರ ಮತ್ತೆ ಹದಗೆಟ್ಟಿದೆ. ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಎಕ್ಯೂಐ ಸೂಚ್ಯಂಕ 401ಕ್ಕೆ ತಲುಪಿದೆ.

ನಗರದಲ್ಲಿ ಎಕ್ಯೂಐ ಸೂಚ್ಯಂಕ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಈ ವಾರದಲ್ಲಿ ಭಾನುವಾರ 301, ಸೋಮವಾರ 348, ಬುಧವಾರ 394, ಗುರುವಾರ 380 ಹಾಗೂ ಇಂದು (ಶುಕ್ರವಾರ) ಇದರ ಮಟ್ಟ 401ಕ್ಕೆ ಏರಿಕೆಯಾಗಿದೆ. 

ಹೆಚ್ಚು ಮಾಲಿನ್ಯಕಾರಕ ಟ್ರಕ್‌ಗಳಿಗೆ ನಗರಕ್ಕೆ ಬರಲು ಇದ್ದ ನಿರ್ಬಂಧವನ್ನು ತೆಗೆದಿರುವುದು ಮತ್ತು ಕಟ್ಟಡ ನಿರ್ಮಾಣದಂತಹ ಚಟುವಟಿಕೆಗಳ ಮೇಲೆ ಹೇರಿದ್ದ ನಿಬಂಧನೆಯನ್ನು ದೆಹಲಿ ಸರ್ಕಾರ ಸಡಿಲಗೊಳಿಸಿರುವುದೇ ಎಕ್ಯೂಐ ಸೂಚ್ಯಂಕ ಏರಿಕೆಗೆ ಕಾರಣ ಎಂದು ಹೇಳಲಾಗಿದೆ.

ನೆರೆಯ ಗಾಜಿಯಾಬಾದ್‌ನಲ್ಲಿ 386, ಗುರ್‌ಗಾಂವ್‌ನಲ್ಲಿ 321, ಗ್ರೇಟರ್ ನೋಯ್ಡಾದಲ್ಲಿ 345, ನೋಯ್ಡಾದಲ್ಲಿ 344 ಎಕ್ಯೂಐ ಸೂಚ್ಯಂಕವಿದ್ದರೆ ಫರಿದಾಬಾದ್‌ನಲ್ಲಿ 410 ಸೂಚ್ಯಂಕ ದಾಖಲಾಗಿದೆ.

ಪುಣೆ ಮೂಲದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯಾಲಜಿ ಅಭಿವೃದ್ಧಿಪಡಿಸಿದ ಗಾಳಿಯ ಗುಣಮಟ್ಟ ಎಚ್ಚರಿಕೆ ವ್ಯವಸ್ಥೆಯ ಪ್ರಕಾರ ಮುಂದಿನ 5–6 ದಿನಗಳಲ್ಲಿ ಗಾಳಿಯ ಗುಣಮಟ್ಟ ಕಳಪೆಯಿಂದ ಗಂಭೀರ ಸ್ವರೂಪಕ್ಕೆ ತಲುಪ‍ಲಿದೆ ಎಂದು ಹೇಳಿದೆ.

ಎಕ್ಯೂಐ ಪ್ರಮಾಣ ಸೊನ್ನೆಯಿಂದ 50 ರಷ್ಟಿದ್ದರೆ 'ಉತ್ತಮ' ಎಂದು, 51ರಿಂದ 100 ರಷ್ಟಿದ್ದರೆ 'ಸಮಾಧಾನಕರ', 101 ರಿಂದ 200 ರಷ್ಟಿದ್ದರೆ 'ಸಾಧಾರಣ', 201 ರಿಂದ 300 ರಷ್ಟಿದ್ದರೆ 'ಕಳಪೆ' ಹಾಗೂ 301 ರಿಂದ 400 ರಷ್ಟಿದ್ದರೆ 'ಅತ್ಯಂತ ಕಳಪೆ' ಎಂದು ಹೇಳಲಾಗುತ್ತದೆ. 401ರಿಂದ 450ರಷ್ಟು ಕಂಡು ಬಂದರೆ 'ತೀವ್ರ ಕಳಪೆ' ಹಾಗೂ 450ಕ್ಕಿಂತ ಹೆಚ್ಚಾದರೆ 'ತೀವ್ರಕ್ಕಿಂತಲೂ ಅಪಾಯಕಾರಿ' ಎಂದು ಪರಿಗಣಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT