ನವದೆಹಲಿ: ಕೆಂಪು ಕೋಟೆ ಬಳಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಸರ್ಕಾರ ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್ ಒತ್ತಾಯಿಸಿದ್ದು, ದೇಶದ ರಾಜಧಾನಿಯಲ್ಲಿ ಇಂತಹ ಘಟನೆ ನಡೆದಿರುವುದರಿಂದ ಜನರಲ್ಲಿ ಭಯ ಉಂಟಾಗಿದೆ ಎಂದು ಹೇಳಿದೆ.

ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಮಾತನಾಡಿ, ಸ್ಫೋಟ ಸಂಭವಿಸಿ 18 ಗಂಟೆಗಳು ಕಳೆದಿವೆ. ಈವರೆಗೂ ಇದು ಭಯೋತ್ಪಾದಕರ ದಾಳಿಯೇ ಎಂಬುವುದು ತಿಳಿದಿಲ್ಲ ಎಂದಿದ್ದಾರೆ.
.ಪಾಕಿಸ್ತಾನ | ನ್ಯಾಯಾಲಯದ ಬಳಿ ಆತ್ಮಾಹುತಿ ಬಾಂಬ್ ದಾಳಿ: 12 ಜನ ಸಾವು.DelhiBlast: ಸ್ಫೋಟದಲ್ಲಿ ಮೃತಪಟ್ಟ ಟ್ಯಾಕ್ಸಿ ಚಾಲಕ, ಸೌಂದರ್ಯವರ್ಧಕ ಅಂಗಡಿ ಮಾಲೀಕ.
ಸರ್ಕಾರ, ಗೃಹ ಸಚಿವಾಲಯ ಹಾಗೂ ಪೊಲೀಸರಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ರಾಷ್ಟ್ರ ರಾಜಧಾನಿಯಲ್ಲಿಯೇ ಇಂತಹ ಘಟನೆ ಸಂಭವಿಸಿರುವುದರಿಂದ ಜನರು ಭಯ ಹಾಗೂ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಖೇರಾ ಹೇಳಿದ್ದಾರೆ.

ಭದ್ರತಾ ಕಾರಣಗಳಿಂದ ಎಲ್ಲಾ ಮಾಹಿತಿಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಆದರೆ ವಿಭಿನ್ನ ಸಿದ್ಧಾಂತಗಳನ್ನು ಮಂಡಿಸಬಾರದು. ಪೊಲೀಸರು ಸುದ್ದಿಗೋಷ್ಠಿ ನಡೆಸಿ ಅಗತ್ಯವಿರುವ ಮಾಹಿತಿಗಳನ್ನು ಹಂಚಿಕೊಳ್ಳಬೇಕು ಎಂದು ಖೇರಾ ಒತ್ತಾಯಿಸಿದ್ದಾರೆ.
.ಸಾವನ್ನು ಕಣ್ಣಾರೆ ಕಂಡೆ.. ಭಯಾನಕ ಸ್ಫೋಟದಲ್ಲಿ ಬದುಕುಳಿದ ಪ್ರತಾಪ್ ಮಾತು.ದೆಹಲಿ ಸ್ಫೋಟ ಪ್ರಕರಣ: ಕಾರು ಚಲಾಯಿಸುತ್ತಿದ್ದ ವ್ಯಕ್ತಿಯ ತಾಯಿಯ ಡಿಎನ್ಎ ಪರೀಕ್ಷೆ.
ಘಟನೆ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು (ಮಂಗಳವಾರ) ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆ ನಡೆಸಿದ್ದಾರೆ.

ಸದಾ ಜನದಟ್ಟಣೆಯಿಂದ ಕೂಡಿರುವ ಐತಿಹಾಸಿಕ ಕೆಂಪುಕೋಟೆಯ ಬಳಿ ಸಂಚಾರ ಸಿಗ್ನಲ್ನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಸೋಮವಾರ ಸಂಜೆ ಭಾರಿ ಸ್ಫೋಟ ಸಂಭವಿಸಿ 12 ಮಂದಿ ಮೃತಪಟ್ಟಿದ್ದಾರೆ. 24ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
.IAS ಅಧಿಕಾರಿ ದಂಪತಿಯ ಮನೆಜಗಳ ಬೀದಿಗೆ: ಎಫ್ಐಆರ್ ದಾಖಲಿಸಿದ ಪತ್ನಿ.ದೆಹಲಿ ಸ್ಫೋಟ: ಚಿಕ್ಕಮಗಳೂರಿನಲ್ಲಿ ಕಟ್ಟೆಚ್ಚರ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.