ನವದೆಹಲಿ: ನೈರುತ್ಯ ದೆಹಲಿಯ ಮಹಿಪಾಲಪುರ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಬಸ್ ಒಂದರ ಚಕ್ರ ಸ್ಫೋಟದಿಂದ ಉಂಟಾದ ಭಾರಿ ಸದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
.ದೆಹಲಿ ಸ್ಫೋಟ | ತನಿಖೆಗೆ ಸಹಕಾರ: ವೈದ್ಯರ ಕೃತ್ಯಗಳ ಜತೆ ಸಂಬಂಧವಿಲ್ಲ; ಫಲಾಹ್ ವಿವಿ.
ಮಹಿಪಾಲಪುರದಲ್ಲಿರುವ ರ್ಯಾಡಿಸನ್ ಹೋಟೆಲ್ ಬಳಿ ಭಾರಿ ಸ್ಫೋಟದ ಸದ್ದು ಕೇಳಿದೆ ಎಂದು ದೆಹಲಿ ಅಗ್ನಿ ಶಾಮಕ ಸೇವೆಗೆ ಬೆಳಿಗ್ಗೆ 9.19ಕ್ಕೆ ಕರೆ ಬಂದಿದೆ. ಕೂಡಲೇ ಮೂರು ಅಗ್ನಿ ಶಾಮಕ ವಾಹನ ಸ್ಥಳಕ್ಕೆ ದೌಡಾಯಿಸಿವೆ.

ತೀವ್ರ ತಪಾಸಣೆ ಬಳಿಕ ಅಧಿಕಾರಿಗಳಿಗೆ ಸ್ಥಳದಲ್ಲಿ ಏನೂ ಕಂಡು ಬಂದಿಲ್ಲ.

‘ಗುರುಗ್ರಾಮಕ್ಕೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಕರೆ ಮಾಡಿ, ಭಾರಿ ಸದ್ದು ಕೇಳಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಾವು ಎಲ್ಲಾ ತಪಾಸಣೆ ನಡೆಸಿದ್ದು, ಏನೂ ಸಿಕ್ಕಿಲ್ಲ’ ಎಂದು ನೈರುತ್ಯ ವಲಯದ ಪೊಲೀಸ್ ಉಪ ಆಯುಕ್ತ ಅಮಿತ್ ಗೋಯಲ್ ಹೇಳಿದ್ದಾರೆ.
.Delhi Red Fort Blast | ತನಿಖೆಗೆ ಸಹಾಯ ಮಾಡಲು ಸಿದ್ದ: ಅಮೆರಿಕ.
ಧೌಲ ಕುಅಃಕ್ಕೆ ತೆರಳುತ್ತಿದ್ದ ಡಿಟಿಸಿ (ದೆಹಲಿ ಸಂಚಾರ ನಿಗಮ) ಬಸ್ ಒಂದರ ಹಿಂಬದಿ ಚಕ್ರ ಸ್ಫೋಟಿಸಿ ಶಬ್ದ ಉಂಟಾಗಿದೆ ಎಂದು ಸ್ಥಳೀಯ ಗಾರ್ಡ್ ಒಬ್ಬರು ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಪರಿಸ್ಥಿತಿ ಸಹಜವಾಗಿದ್ದು, ಹೆದರುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
.Delhi Blast: ಬಾಬರಿ ಮಸೀದಿ ಧ್ವಂಸ ದಿನವಾದ ಡಿ. 6ರಂದು ಪ್ರಬಲ ಸ್ಫೋಟದ ಪಿತೂರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.