ನವದೆಹಲಿ: ದೇಶದ ಗಮನ ಸೆಳೆದಿರುವ ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು, ಬಿಜೆಪಿ 26 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಸ್ಪಷ್ಟ ಬಹುಮತ ಗಳಿಸಿರುವ ಬಿಜೆಪಿ ಸರ್ಕಾರ ರಚಿಸಲು ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ ಆಡಳಿತಾರೂಢ ಎಎಪಿಗೆ ಭಾರಿ ಹಿನ್ನಡೆಯಾಗಿದೆ.

ಈ ಬಾರಿ ಬಿಜೆಪಿ ಸರಳ ಬಹುಮತದ ಗಡಿ ದಾಟಿ ಅಧಿಕಾರಕ್ಕೇರಲಿದ್ದು, ಆಡಳಿತಾರೂಢ ಎಎಪಿ ಎರಡನೇ ಸ್ಥಾನಕ್ಕೆ ಕುಸಿಯಲಿದೆ ಎಂದು ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು.

ವಿವಿಧ ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಭವಿಷ್ಯ ಈಗ ನಿಜವೆನಿಸಿದೆ.

'ಇಂಡಿಯಾ' ಮೈತ್ರಿಕೂಟದ ಅಂಗಪಕ್ಷವೂ ಆಗಿರುವ ಕಾಂಗ್ರೆಸ್ ಉತ್ತಮ ಸಾಧನೆ ಮಾಡುವಲ್ಲಿ ಮತ್ತೆ ವಿಫಲಗೊಳ್ಳಲಿದೆ ಎಂದು ಮತಗಟ್ಟೆಗಳು ಸೂಚಿಸಿತ್ತು. ಇದು ಕೂಡಾ ನಿಜವೆನಿಸಿದ್ದು, ಸತತ ಮೂರನೇ ಸಲ ಕಾಂಗ್ರೆಸ್ 'ಶೂನ್ಯ' ಸಾಧನೆ ಮಾಡಿದೆ.

ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಮತದಾನ ನಡೆದಿತ್ತು. ಶೇ 60.42ಕ್ಕಿಂತಲೂ ಹೆಚ್ಚು ಮತದಾನವಾಗಿತ್ತು.

ಆಕ್ಸಿಸ್ ಮೈ ಇಂಡಿಯಾ ಬಿಜೆಪಿ 45ರಿಂದ 55 ಮತ್ತು ಎಎಪಿ 15ರಿಂದ 25 ಸ್ಥಾನಗಳನ್ನು ಗಳಿಸಲಿದೆ ಎಂದಿತ್ತು. ಹಾಗೆಯೇ ಟುಡೇ ಚಾಣಕ್ಯ ಎಎಪಿ 45-57 ಮತ್ತು ಎಎಪಿ 13-25 ಸ್ಥಾನಗಳನ್ನು ಗೆಲ್ಲಲಿದೆ ಎಂದಿತ್ತು. ಪೀಪಲ್ಸ್ ಇನ್ಸೈಟ್ ಬಿಜಿಪಿ 40ರಿಂದ 44 ಮತ್ತು ಎಎಪಿ 25ರಿಂದ 29 ಸ್ಥಾನ ಗೆಲ್ಲಲಿದೆ ಎಂದು ಹೇಳಿತ್ತು.

ಕೇವಲ ಎರಡು ಚುನಾವಣೋತ್ತರ ಸಮೀಕ್ಷೆಗಳು ಮಾತ್ರ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಎಂದಿತ್ತು.

ದೆಹಲಿ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳ ಸಂಪೂರ್ಣ ಅಂಕಿಅಂಶ ಇಲ್ಲಿದೆ

ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ (ಸಂಜೆ 4.50ರ ಟ್ರೆಂಡ್)
.Delhi Exit Polls: ಈ ಬಾರಿಯೂ ಕಾಂಗ್ರೆಸ್ನದ್ದು ಶೂನ್ಯ ಸಾಧನೆ ಎಂದ ಸಮೀಕ್ಷೆ.Delhi Exit Poll: ಬಿಜೆಪಿಗೆ ಗದ್ದುಗೆ ಎನ್ನುತ್ತಿವೆ ಸಮೀಕ್ಷೆ; AAPಗೆ 2ನೇ ಸ್ಥಾನ.Delhi Exit Poll 2025 | ಮತಗಟ್ಟೆ ಸಮೀಕ್ಷೆ ತಿರಸ್ಕರಿಸಿದ ಎಎಪಿ; ಬಿಜೆಪಿ ಸ್ವಾಗತ.Delhi Exit polls: 2013, 2015, 2020ರಲ್ಲಿ ಸಮೀಕ್ಷೆ ಏನಂದಿದ್ದವು; ಏನಾಗಿತ್ತು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.