ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬುಧವಾರ ಮತದಾನ ಪೂರ್ಣಗೊಂಡಿದೆ. ಇದರ ಬೆನ್ನಲ್ಲೇ ವಿವಿಧ ಸಂಸ್ಥೆಗಳು ಪ್ರಕಟಿಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಸರಳ ಬಹುಮತ ಪಡೆದು ಅಧಿಕಾರಕ್ಕೇರಲಿದೆ ಎಂದು ಅಂದಾಜಿಸಿವೆ.

ಮೂರನೇ ಬಾರಿ ಅಧಿಕಾರಕ್ಕೇರುವ ಎಎಪಿ ಕನಸು ಭಗ್ನಗೊಳ್ಳುವ ಸಾಧ್ಯತೆ ಹೆಚ್ಚು ಎಂದೂ ಈ ಸಮೀಕ್ಷೆಗಳು ಹೇಳಿವೆ. ಇದರೊಂದಿಗೆ ಕಾಂಗ್ರೆಸ್ನ ಶೂನ್ಯ ಸಾಧನೆ ಈ ಬಾರಿಯೂ ಮುಂದುವರಿಯಲಿದೆ ಎಂದು ಸಮೀಕ್ಷೆಗಳು ಅಂದಾಜಿಸಿವೆ.
.Delhi Exit Poll: ಬಿಜೆಪಿಗೆ ಗದ್ದುಗೆ ಎನ್ನುತ್ತಿವೆ ಸಮೀಕ್ಷೆ; AAPಗೆ 2ನೇ ಸ್ಥಾನ.Delhi Exit Poll 2025 | ಮತಗಟ್ಟೆ ಸಮೀಕ್ಷೆ ತಿರಸ್ಕರಿಸಿದ ಎಎಪಿ; ಬಿಜೆಪಿ ಸ್ವಾಗತ.
ಒಂದು ಕ್ಷೇತ್ರವನ್ನು ಕಾಂಗ್ರೆಸ್ ಗೆಲ್ಲಬಹುದು ಎಂದು ಮ್ಯಾಟ್ರಿಜ್ ಸಂಸ್ಥೆ ಹೇಳಿದೆ. ಪೀಪಲ್ಸ್ ಪಲ್ಸ್ ಸಮೀಕ್ಷೆಯಲ್ಲಿ ಶೂನ್ಯ, ಪೀಪಲ್ಸ್ ಇನ್ಸೈಟ್ನಲ್ಲಿ ಶೂನ್ಯ ಅಥವಾ ಒಂದು ಕ್ಷೇತ್ರ ಎಂದಿವೆ. ಚಾಣಕ್ಯ ಸ್ಟ್ರಾಟಜಿ ಸಂಸ್ಥೆಯ ಸಮೀಕ್ಷೆಯಲ್ಲಿ ಮಾತ್ರ ಕಾಂಗ್ರೆಸ್ 2ರಿಂದ 3 ಕ್ಷೇತ್ರಗಳನ್ನು ಗೆಲ್ಲಬಹುದು ಎಂದು ಹೇಳಿದೆ.

ಆಡಳಿತಾರೂಢ ಎಎಪಿಯು ನಾಲ್ಕನೇ ಬಾರಿಗೆ ಅಧಿಕಾರ ಹಿಡಿಯುವ ಉತ್ಸಾಹದಲ್ಲಿದೆ. 1998ರ ನಂತರ ಅಧಿಕಾರಕ್ಕೆ ಮರಳುವ ವಿಶ್ವಾಸದಲ್ಲಿ ಬಿಜೆಪಿ ಇದೆ. 2020ರ ಚುನಾವಣೆಯಲ್ಲಿ ಶೇ 62.82ರಷ್ಟು ಮತದಾನವಾಗಿತ್ತು. 2015ರಲ್ಲಿ ಶೇ 67.47ರಷ್ಟು ಮತದಾನವಾಗಿತ್ತು.
.Delhi Exit polls: 2013, 2015, 2020ರಲ್ಲಿ ಸಮೀಕ್ಷೆ ಏನಂದಿದ್ದವು; ಏನಾಗಿತ್ತು?.Delhi Elections 2025 Voting Live: ಸಂಜೆ 5 ಗಂಟೆ ಹೊತ್ತಿಗೆ ಶೇ 57.70ರಷ್ಟು ಮತದಾನ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.