ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸತತವಾಗಿ ಮೂರನೇ ದಿನವೂ ಮಳೆ ಸುರಿದಿದ್ದು, ಕನಿಷ್ಠ ತಾಪಮಾನ 13.2 ಡಿಗ್ರಿ ಸೆಲ್ಷಿಯಸ್‌ನಷ್ಟು ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಸಫ್ದರ್ಜಂಗ್ ಹವಾಮಾನ ವೀಕ್ಷಣಾಲಯದಲ್ಲಿ ಸೋಮವಾರ ಬೆಳಿಗ್ಗೆ 8.30ರಿಂದ ಮಂಗಳವಾರ ಬೆಳಿಗ್ಗೆ 8.30ರ ನಡುವೆ ದಾಖಲಾದ ಮಾಹಿತಿ ಪ್ರಕಾರ ಒಟ್ಟು 4.7 ಮಿ.ಮೀ ಮಳೆಯಾಗಿದೆ. ಇದೇ ಅವಧಿಯಲ್ಲಿ ಪಾಲಂ, ಲೋಧಿ ರಸ್ತೆ, ಆಯನಗರ ಮತ್ತು ರಿಡ್ಜ್‌ನಲ್ಲಿರುವ ಹವಾಮಾನ ಕೇಂದ್ರಗಳಲ್ಲಿ ಕ್ರಮವಾಗಿ 12 ಮಿ.ಮೀ ಮತ್ತು 4.8 ಮಿ.ಮೀ, 8.9 ಮಿ.ಮೀ ಮತ್ತು 6.2 ಮಿ.ಮೀ ಮಳೆಯಾಗಿದೆ.

ಭಾನುವಾರ ಗುಡುಗು, ಮಿಂಚು ಸಹಿತ ಬಿರುಸಿನ ಮಳೆ ಸುರಿಯಿತು. ಸಫ್ದರ್ಜಂಗ್ ಹವಾಮಾನ ಕೇಂದ್ರದಲ್ಲಿ 39.9 ಮಿ.ಮೀ ಮಳೆ ಸುರಿದಿರುವುದಾಗಿ ದಾಖಲಾಗಿತ್ತು.

ಕಳೆದ ಶುಕ್ರವಾರ 1.1 ಡಿಗ್ರಿ ಸೆ. ನಷ್ಟು ತಾಪಮಾನ ದಾಖಲಾಗಿತ್ತು. ಇದು ಹದಿನೈದು ವರ್ಷಗಳಲ್ಲೇ ದಾಖಲಾದ ಅತ್ಯಂತ ಕಡಿಮೆ ತಾಪಮಾನವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.