ಬೆಂಗಳೂರನ್ನು ದೇಶದ ರಾಜಧಾನಿಯನ್ನಾಗಿ ಮಾಡಬೇಕು ಎಂದು ದೆಹಲಿ ಯುವತಿಯೊಬ್ಬರು ಸಲಹೆ ನೀಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ, ಸುರಕ್ಷತೆ, ಮೂಲಸೌಕರ್ಯಗಳ ಕುರಿತು ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.

ಬೆಂಗಳೂರಿನಲ್ಲಿ ನೆಲೆಸಿರುವ ದೆಹಲಿಯ ಸಿಮ್ರಿಧಿ ಮಖಿಜಾ ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, 'ಬೆಂಗಳೂರನ್ನು ರಾಷ್ಟ್ರ ರಾಜಧಾನಿ ಎಂದು ಘೋಷಿಸಬೇಕು. ದೆಹಲಿಗೆ ಹೋಲಿಸಿದರೆ, ಈ ನಗರ ಯೋಗ್ಯವಾಗಿದೆ. ಏಕೆಂದರೆ, ಎರಡು ತಿಂಗಳಿನಿಂದ ನಾನಿಲ್ಲಿದ್ದೇನೆ. ದೆಹಲಿ ಗ್ಯಾಸ್ ಚೇಂಬರ್ನಂತಿದೆ. ಅದು ಈಗಲೂ ರಾಷ್ಟ್ರ ರಾಜಧಾನಿಯಾಗಿಯೇ ಉಳಿದಿರುವುದೇಕೆ ಎಂಬುದು ನನಗಂತು ಗೊತ್ತಾಗುತ್ತಿಲ್ಲ. ಸದ್ಯ ನಾನು ಬೆಂಗಳೂರಿನಲ್ಲಿದ್ದೇನೆ. ಉಸಿರಾಟಕ್ಕೆ ತೊಂದರೆಯಾಗುತ್ತಿಲ್ಲ. ಈಗ ರಾತ್ರಿ 10ಗಂಟೆಯಾಗಿದೆ. ಈಗಷ್ಟೇ ಸ್ನೇಹಿತೆಯನ್ನು ಭೇಟಿಯಾಗಿ ಸುರಕ್ಷಿತವಾಗಿ ಮನೆಗೆ ತೆರಳುತ್ತಿದ್ದೇನೆ. ಸುರಕ್ಷಿತವಾಗಿದ್ದೇನೆ ಎಂಬ ಭಾವ ಮೂಡುತ್ತಿದೆ. ಇಲ್ಲಿನ ರಸ್ತೆಗಳು ಸುರಕ್ಷಿತವಾಗಿವೆ. ಮಹಿಳಾ ಸುರಕ್ಷತೆ ದೊಡ್ಡ ಸಮಸ್ಯೆಯಾಗಿಲ್ಲ. ನೀವು ದೆಹಲಿಯಂತಹ ನಗರವನ್ನು ನೋಡಿದರೆ, ಇಂತಹ ಸಾಕಷ್ಟು ಸಮಸ್ಯೆಗಳು ತಾಂಡವವಾಡುತ್ತಿವೆ. ಹಾಗಾಗಿ, ನಾನು ಹೇಳುತ್ತಿರುವುದು ಇಷ್ಟೇ. ಯಾವುದೇ ಅಂತರರಾಷ್ಟ್ರೀಯ ಅತಿಥಿ ನಮ್ಮ ದೇಶಕ್ಕೆ ಬರುವುದಾದರೆ, ಕೆಟ್ಟ ಗಾಳಿ, ಹದಗೆಟ್ಟ ರಸ್ತೆ, ನಡೆದಾಡಲಾಗದಷ್ಟು ಇಕ್ಕಟ್ಟನ್ನು ಅನುಭವಿಸಬೇಕು. ನಾವು, ಉತ್ತಮವಾಗಿ ಉಸಿರಾಡಲು ಸಾಧ್ಯವಿರುವ ಬೆಂಗಳೂರಿನಂತಹ ನಗರಕ್ಕೆ ಅವರನ್ನು ಸ್ವಾಗತಿಸಬೇಕು. ಅದು ಮೂಲಭೂತ ಹಕ್ಕಲ್ಲವೇ' ಎಂದು ಪ್ರತಿಪಾದಿಸಿದ್ದಾರೆ.

ಹಾಗೆಯೇ, 'ನಾನು ದೆಹಲಿ ಯುವತಿಯೇ ಆಗಿದ್ದರೂ, ಅದು (ದೆಹಲಿ) ಈಗಲೂ ರಾಷ್ಟ್ರ ರಾಜಧಾನಿ ಎಂಬುದನ್ನು ನಂಬುವಂತಹ ಯಾವುದೇ ಕಾರಣಗಳು ನನ್ನ ಬಳಿ ಇಲ್ಲ' ಎಂದು ಹೇಳಿದ್ದಾರೆ.

ಈ ವಿಡಿಯೊಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.

'ನಿಮ್ಮ ಮಾತನ್ನು ಒಪ್ಪುತ್ತೇನೆ' ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

'ಬೆಂಗಳೂರು ರಾಷ್ಟ್ರ ರಾಜಧಾನಿಯಾಗುವುದು ಬೇಡ. ಜನಸಂಖ್ಯೆ ಈಗಲೇ ತುಂಬಿ ತುಳುಕುತ್ತಿದೆ' ಎಂದು ಮತ್ತೊಬ್ಬರು ಹೇಳಿದ್ದಾರೆ.

'ರಾಜಧಾನಿಯಾಗಿ ಘೋಷಣೆಯಾದ ಸಂದರ್ಭದಲ್ಲಿ ದೆಹಲಿ ವಾತಾವರಣ ಚೆನ್ನಾಗಿತ್ತು' ಎಂದು ಇನ್ನೊಬ್ಬರು ಸ್ಮರಿಸಿದ್ದಾರೆ.

ವ್ಯಕ್ತಿಯೊಬ್ಬರು, 'ನಾನು ಬೆಂಗಳೂರಿನವ. ಆಕೆ ಹೇಳುತ್ತಿರುವುದು ಸುಳ್ಳು. ನಮ್ಮ ಸಿಟಿ ಯುವತಿ ಹೇಳುತ್ತಿರುವಷ್ಟೇನೂ ಚೆನ್ನಾಗಿಲ್ಲ. ದಯವಿಟ್ಟು ಹೈದರಾಬಾದ್, ಚೆನ್ನೈ ಅಥವಾ ಪುಣೆಯನ್ನು ಪರಿಗಣಿಸಿ' ಎಂದು ಸಲಹೆ ನೀಡಿದ್ದಾರೆ.

'ಆ (ಬೆಂಗಳೂರು ರಾಷ್ಟ್ರ ರಾಜಧಾನಿ) ಘೋಷಣೆಯಾದರೆ, ನೀವು ಮುಂಬೈಗೆ ಹೋಗಿ ಇದೇ ರೀತಿಯ ವಿಡಿಯೊ ಮಾಡುತ್ತಿರಿ' ಎಂದು ಮತ್ತೊಬ್ಬರು ಹೇಳಿದ್ದಾರೆ.

ದೆಹಲಿಯ ವಾಯುಮಾಲಿನ್ಯ, ಅಲ್ಲಿನ ಚಳಿ, ಮಹಿಳೆಯರ ಸುರಕ್ಷತೆ, ಭಾರಿ ಜನಸಂಖ್ಯೆ, ಜೀವನ ಮಟ್ಟದ ಕುರಿತಾಗಿಯೂ ಸಾಕಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.