ನವದೆಹಲಿ: ಶಾಸಕರಿಗೆ ಪ್ರತಿ ವರ್ಷ ನೀಡುವ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಬಿಜೆಪಿ ನೇತೃತ್ವದ ದೆಹಲಿ ಸರ್ಕಾರವು ₹15 ಕೋಟಿಯಿಂದ ₹5ಕೋಟಿಗೆ ಇಳಿಸಿದೆ.

ಕಳೆದ ಅಕ್ಟೋಬರ್ನಲ್ಲಿ ಎಎಪಿ ಸರ್ಕಾರವು, ವಿಧಾನಸಭಾ ಚುನಾವಣೆಗೂ ಮುನ್ನ ಈ ನಿಧಿಯಡಿ ನೀಡುವ ಮೊತ್ತವನ್ನು ₹10 ಕೋಟಿಯಿಂದ ₹15 ಕೋಟಿಗೆ ಹೆಚ್ಚಿಸಿತ್ತು.

ಮೇ 2ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮೊತ್ತವನ್ನು ಇಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೆಹಲಿಯ ನಗರಾಭಿವೃದ್ಧಿ ಇಲಾಖೆ ಈಚೆಗೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

ಎಎಪಿ ಸರ್ಕಾರವು 2021–22, 22–23ರಲ್ಲಿ ಪ್ರತಿ ಶಾಸಕರಿಗೆ ತಲಾ ₹4 ಕೋಟಿ, 2023–24ರಲ್ಲಿ ತಲಾ ₹7 ಕೋಟಿಯನ್ನು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಒದಗಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.