ನವದೆಹಲಿ: ದೇಶದ ವಿಮಾನ ನಿಲ್ದಾಣಗಳಲ್ಲಿ ಸರಕು ಸಾಗಣೆ ಸೇವೆ ನೀಡುತ್ತಿದ್ದ ಟರ್ಕಿಯ ಏವಿಯೇಷನ್ ಕಂಪನಿಯಾದ ‘ಸೆಲೆಬಿ’ಗೆ ನೀಡಿದ್ದ ಸೇವಾ ಪರವಾನಗಿಯನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

ಮೇ 23ರಂದು ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಸಚಿನ್ ದತ್ತ ಇಂದು (ಸೋಮವಾರ) ಪ್ರಕಟಿಸಿದ್ದಾರೆ.

ಸೆಲೆಬಿ ಏರ್ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಸೆಲೆಬಿ ದೆಹಲಿ ಕಾರ್ಗೋ ಟರ್ಮಿನಲ್ ಮ್ಯಾನೇಜ್ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಸರಕು ಸಾಗಣೆ ಸೇವೆ ಒದಗಿಸುತ್ತಿವೆ.

ಭಾರತದ ವಿರುದ್ಧ ಪಾಕಿಸ್ತಾನ ನಡೆಸಿದ ದಾಳಿಯನ್ನು ಟರ್ಕಿಯು ಬೆಂಬಲಿಸಿತ್ತು. ಈ ಹಿನ್ನೆಲೆಯಲ್ಲಿ ಮೇ 16ರಂದು ‘ಸೆಲೆಬಿ ಹವಾ ಸರ್ವಿಸಿ ಎಎಸ್’ ಕಂಪನಿಗೆ ನೀಡಿದ್ದ ಸೇವಾ ಪರವಾನಗಿಯನ್ನು ರದ್ದುಪಡಿಸುವ ಮೂಲಕ ಕೇಂದ್ರ ಸರ್ಕಾರ ಟರ್ಕಿ ವಿರುದ್ಧ ಕ್ರಮಕ್ಕೆ ಮುಂದಾಗಿತ್ತು.

ಸೆಲೆಬಿ ಕಂಪನಿಗೆ ವಿಮಾನ ನಿಲ್ದಾಣಗಳಲ್ಲಿ ಸರಕು ಸಾಗಣೆ ಸೇವೆಗೆ ಸಂಬಂಧಿಸಿದಂತೆ ಪರವಾನಗಿವನ್ನು ನೀಡಲಾಗಿತ್ತು. ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಇದನ್ನು ಹಿಂಪಡೆಯಲಾಗಿದೆ ಎಂದು ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆಯು (ಬಿಸಿಎಎಸ್) ತಿಳಿಸಿತ್ತು.

ಕಳೆದ 15 ವರ್ಷದಿಂದಲೂ ದೇಶದ ವಿಮಾನಯಾನ ವಲಯದಲ್ಲಿ ಸೆಲೆಬಿ ಕಂಪನಿಯು ಸೇವೆ ಒದಗಿಸುತ್ತಿದೆ. ದೆಹಲಿ, ಬೆಂಗಳೂರು, ಕೊಚ್ಚಿನ್, ಹೈದರಾಬಾದ್, ಗೋವಾ, ಕಣ್ಣೂರು, ದೆಹಲಿ, ಮುಂಬೈ, ಅಹಮದಾಬಾದ್ ವಿಮಾನ ನಿಲ್ದಾಣಗಳಲ್ಲಿ ಈ ಕಂಪನಿಯ ಅಂಗಸಂಸ್ಥೆಗಳು ಕಾರ್ಯಾಚರಣೆ ನಡೆಸುತ್ತಿವೆ. 10 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಇದ್ದಾರೆ.

ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ಒಪ್ಪಂದಗಳನ್ನು ರದ್ದುಪಡಿಸಿದೆ. ಈ ಬಗ್ಗೆ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಸೆಲೆಬಿ ಪ್ರತಿಕ್ರಿಯಿಸಿತ್ತು.
.ಭಾರತದ ವಿರುದ್ಧ ಮೊಕದ್ದಮೆ ದಾಖಲಿಸಿದ ಟರ್ಕಿ ಕಂಪನಿ ಸೆಲೆಬಿ.ರಾಷ್ಟ್ರೀಯ ಭದ್ರತೆ|ಟರ್ಕಿಯ ಸೆಲೆಬಿ ಕಂಪನಿಗೆ ನೀಡಿದ್ದ ಅನುಮತಿ ರದ್ದುಪಡಿಸಿದ ಭಾರತ.ಪಾಕ್ಗೆ ಬೆಂಬಲ ನೀಡಿದ್ದಕ್ಕೆ ಪ್ರತೀಕಾರ: ಟರ್ಕಿ ಜತೆ ಒಪ್ಪಂದ ರದ್ದುಪಡಿಸಿದ IIT.ಕೊಚ್ಚಿ ಏರ್ಪೋರ್ಟ್ಲ್ಲಿಯೂ ಟರ್ಕಿ ಕಂಪನಿ ಸೇವೆ ಬಂದ್: ಮುಂದುವರೆದ ವ್ಯಾಪಾರ ಸಮರ.ಟರ್ಕಿ ಸೆಲೆಬಿಯ ಅನುಮತಿ ರದ್ದು ಪ್ರಕರಣ | ಮುನ್ನೆಚ್ಚರಿಕೆಯ ಅಗತ್ಯವಿಲ್ಲ: ಕೇಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.