ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿಗೆ ₹25 ಕೋಟಿ ಪಾವತಿಸುವಂತೆ ರೆಡ್ಡಿಗೆ ಬೆದರಿಕೆ ಒಡ್ಡಿದ ಕವಿತಾ: ಸಿಬಿಐ

Published 13 ಏಪ್ರಿಲ್ 2024, 6:23 IST
Last Updated 13 ಏಪ್ರಿಲ್ 2024, 6:23 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ₹25 ಕೋಟಿ ಪಾವತಿಸುವಂತೆ ಅರಬಿಂದೋ ಫಾರ್ಮಾ ಪ್ರವರ್ತಕ ಶರತ್ ಚಂದ್ರ ರೆಡ್ಡಿ ಅವರಿಗೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ. ಕವಿತಾ ಬೆದರಿಕೆ ಒಡಿದ್ದರು ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ವಿಶೇಷ ನ್ಯಾಯಾಯಲಕ್ಕೆ ತಿಳಿಸಿದೆ.

ಒಂದು ವೇಳೆ ಹಣವನ್ನು ಪಾವತಿಸದಿದ್ದರೆ, ತೆಲಂಗಾಣ ಹಾಗೂ ದೆಹಲಿಯಲ್ಲಿ ರೆಡ್ಡಿ ಅವರ ವ್ಯವಹಾರಕ್ಕೆ ಹಾನಿಯಾಗಲಿದೆ ಎಂದು ಕವಿತಾ ಬೆದರಿಕೆ ಒಡ್ಡಿರುವುದಾಗಿ ಸಿಬಿಐ ನ್ಯಾಯಾಯಲಕ್ಕೆ ತಿಳಿಸಿದೆ.

ದೆಹಲಿ ಸರ್ಕಾರದೊಂದಿಗೆ ಸಂಪರ್ಕ ಹೊಂದಿರುವುದಾಗಿ ರೆಡ್ಡಿ ಅವರಿಗೆ ಹೇಳಿರುವ ಕವಿತಾ, ರಾಷ್ಟ್ರ ರಾಜಧಾನಿಯಲ್ಲಿ ಮದ್ಯ ವ್ಯಾಪಾರ ನಡೆಸಲು ಸಹಾಯ ನೀಡುವುದಾಗಿ ಭರವಸೆ ನೀಡಿದ್ದರು. ಸಗಟು ವ್ಯವಹಾರಕ್ಕೆ ₹25 ಕೋಟಿ ಮತ್ತು ಪ್ರತಿ ಚಿಲ್ಲರೆ ವ್ಯಾಪಾರಕ್ಕೆ ₹5 ಕೋಟಿ ಮುಂಗಡವಾಗಿ ವಾಪತಿಸಲು ತಿಳಿಸಿದ್ದರು ಎಂದು ಸಿಬಿಐ ಮಾಹಿತಿ ನೀಡಿದೆ.

ದೆಹಲಿ ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರನ್ನು ಏಪ್ರಿಲ್ 15ರವರೆಗೆ ಸಿಬಿಐ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕವಿತಾ ಅವರನ್ನು ಮಾರ್ಚ್ 15ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನ ನಿವಾಸದಿಂದ ಬಂಧಿಸಿ ತಿಹಾರ್ ಜೈಲಿನಲ್ಲಿ ಇರಿಸಿತ್ತು. ದೆಹಲಿಯ ವಿಶೇಷ ನ್ಯಾಯಾಯಲದ ಅನುಮತಿ ಪಡೆದ ಬಳಿಕ ಸಿಬಿಐ ಅಧಿಕಾರಿಗಳು ಅವರನ್ನು ಗುರುವಾರ ಬಂಧಿಸಿದ್ದರು.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಆರೋಪಿಯಾಗಿರುವ ರೆಡ್ಡಿ ಅವರನ್ನು ಇ.ಡಿ, ತನ್ನ ಪ್ರಕರಣದಲ್ಲಿ ಸಾಕ್ಷೀದಾರರನ್ನಾಗಿಸಿದೆ. ಅವರ ವಿರುದ್ಧ ಸಿಬಿಐ ಇನ್ನಷ್ಟೇ ಚಾರ್ಚ್ ಶೀಟ್ ಸಲ್ಲಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT