ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ನಕಲಿ ಕ್ಯಾನ್ಸರ್‌ ಔಷಧ ಮಾರಾಟ ಜಾಲ ಪತ್ತೆ: 8 ಮಂದಿ ಬಂಧನ

Published 13 ಮಾರ್ಚ್ 2024, 11:18 IST
Last Updated 13 ಮಾರ್ಚ್ 2024, 11:18 IST
ಅಕ್ಷರ ಗಾತ್ರ

ನವದೆಹಲಿ: ನಕಲಿ ಕ್ಯಾನ್ಸರ್‌ ಔಷಧ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿದ ದೆಹಲಿ ಅಪರಾಧ ವಿಭಾಗ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ.

ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ಜತೆ ಮಾಹಿತಿ ಹಂಚಿಕೊಂಡಿರುವ ಅಪರಾಧ ವಿಭಾಗದ ವಿಶೇಷ ಪೊಲಿಸ್‌ ಆಯುಕ್ತೆ ಶಾಲಿನಿ ಸಿಂಗ್‌, ‘ಮಾರುಕಟ್ಟೆಯಲ್ಲಿ ನಕಲಿ ಕ್ಯಾನ್ಸರ್‌ ಔಷಧ ಮಾರಾಟವಾಗುತ್ತಿದ್ದ ಖಚಿತ ಮಾಹಿತಿ ಬಂದಿತ್ತು. ಅದನ್ನು ಆಧರಿಸಿ ತನಿಖೆ ನಡೆಸಲಾಗಿತ್ತು. ಇಬ್ಬರು ಆರೋಪಿಗಳು ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಾರೆ, ಕ್ಯಾನ್ಸರ್ ಔಷಧಿಯನ್ನು ಬಳಸಿದ ನಂತರ ಖಾಲಿ ಬಾಟಲಿಗಳನ್ನು ವಿಲೇವಾರಿ ಮಾಡುವ ಬದಲು ಅದನ್ನು ₹ 4000-₹5000ಗೆ ಮಾರಾಟ ಮಾಡುತ್ತಿದ್ದರು. ಅದನ್ನು ಖರೀದಿಸುತ್ತಿದ್ದವರಿಗೂ ವೈದ್ಯಕೀಯ ವೃತ್ತಿಯೊಂದಿಗೆ ನಂಟಿದೆ ಎಂದಿದ್ದಾರೆ.

ಮೋತಿ ನಗರದಲ್ಲಿ 2 ಫ್ಲಾಟ್‌ಗಳಲ್ಲಿ ಖಾಲಿ ಬಾಟಲಿಗಳಲ್ಲಿ ನಕಲಿ ಔಷಧ ತುಂಬಿಸುವ ಕೆಲಸ ನಡೆಯುತ್ತಿತ್ತು. ಅವರು ₹100ರ ನಕಲಿ ಇಂಜೆಕ್ಷನ್ ದ್ರವಗಳನ್ನು ಖರೀದಿಸಿ ಕ್ಯಾನ್ಸರ್ ಔಷಧದ ಬಾಟಲಿಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದರು. ಈ ನಕಲಿ ಔಷಧ ಮಾರಾಟ ಜಾಲ ಬಿಹಾರದವರೆಗೂ ವಿಸ್ತರಿಸಿದೆ. ಅಲ್ಲಿಗೂ ನಮ್ಮ ತಂಡ ಹೋಗಿದ್ದು ಸಮಗ್ರ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT