ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ಗಾಳಿಯ ಗುಣಮಟ್ಟ: ದೆಹಲಿಯಲ್ಲಿ ನವೆಂಬರ್‌ 9–18ರವರೆಗೆ ಶಾಲೆಗಳಿಗೆ ರಜೆ

Published 8 ನವೆಂಬರ್ 2023, 9:42 IST
Last Updated 8 ನವೆಂಬರ್ 2023, 9:42 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟ ಹಿನ್ನೆಲೆಯಲ್ಲಿ ನವೆಂಬರ್‌ 9 ರಿಂದ 18ರಿಂದ ಶಾಲೆಗಳನ್ನು ಬಂದ್‌ ಮಾಡುವಂತೆ ಕೇಜ್ರಿವಾಲ್‌ ಸರ್ಕಾರ ಆದೇಶಿಸಿದೆ. 

ಮುಂದಿನ ಕೆಲವು ದಿನಗಳವರೆಗೂ ಪ್ರತಿಕೂಲ ವಾತಾವರಣ ಮುಂದುವರಿಯಲಿದೆ ಎಂದು ಮುನ್ಸೂಚನೆಯಿದೆ. ಹೀಗಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಶಿಕ್ಷಣ ನಿರ್ದೇಶನಾಲಯ ಬುಧವಾರ ತಿಳಿಸಿದೆ.

ಮಕ್ಕಳ ಆರೋಗ್ಯದ ದೃಷ್ಟಿಯಿಂದ ಚಳಿಗಾಲದ ರಜೆಯನ್ನು ಡಿಸೆಂಬರ್‌– ಜನವರಿಯಲ್ಲಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಹವಾಮಾನದ ವೈಪರೀತ್ಯದ ಹಿನ್ನೆಲೆ ಅವಧಿಗೂ ಮುನ್ನ ಅಂದರೆ ನವೆಂಬರ್‌ 9 ರಿಂದ 18ರಿಂದ ನೀಡಲಾಗುತ್ತಿದೆ. 

ಪರಿಸರ ಸಚಿವ ಗೋಪಾಲ್‌ ರೈ, ಶಿಕ್ಷಣ ಸಚಿವ ಅತಿಶಿ, ಸಾರಿಗೆ ಸಚಿವ ಕೈಲಾಶ್‌ ಗೆಹ್ಲೋತ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆ ನಡೆಸಿದ ಬಳಿಕ  ಈ ನಿರ್ಧಾರ ಕೈಗೊಳ್ಳಲಾಗಿದೆ. 

ಈ ಹಿಂದೆ ಪ್ರಾಥಮಿಕ ಶಾಲೆಗಳಿಗೆ ನ. 10ರವರೆಗೆ ಮಾತ್ರ ರಜೆ ಘೋಷಿಸಿ, 6ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮುಖಾಂತರ ಪಾಠ ಮಾಡುವ ಅವಕಾಶ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT