ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌ ವಂಚಿತ ಶಾಸಕ ಚಿಂತಾಮಣಿ ಬಿಜೆಪಿಗೆ?

Published 22 ಅಕ್ಟೋಬರ್ 2023, 15:51 IST
Last Updated 22 ಅಕ್ಟೋಬರ್ 2023, 15:51 IST
ಅಕ್ಷರ ಗಾತ್ರ

ಬಲರಾಂಪುರ (ಪಿಟಿಐ): ಕಾಂಗ್ರೆಸ್ ಶಾಸಕ ಚಿಂತಾಮಣಿ ಮಹಾರಾಜ್ ಅವರಿಗೆ ಛತ್ತೀಸಗಢ ವಿಧಾನಸಭಾ ಚುನಾವಣೆಗೆ ಟಿಕೆಟ್ ನಿರಾಕರಿಸಲಾಗಿದ್ದು, ಅಂಬಿಕಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದರೆ ಬಿಜೆಪಿ ಸೇರುವ ಬಗ್ಗೆ ತಾವು ಯೋಚಿಸಬಹುದು ಎಂದು ಭಾನುವಾರ ಹೇಳಿದ್ದಾರೆ.

ಉಪಮುಖ್ಯಮಂತ್ರಿ ಟಿ.ಎಸ್.ಸಿಂಗ್ ದೇವ್ ಅವರು ಅಂಬಿಕಾಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಮಹಾರಾಜ್  ಅವರು ಪ್ರಸ್ತುತ ಬಲರಾಂಪುರ ಜಿಲ್ಲೆಯ ಸಾಮ್ರಿ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಅಲ್ಲಿ ಕಾಂಗ್ರೆಸ್ ವಿಜಯ್ ಪೈಕ್ರಾ ಅವರನ್ನು ಕಣಕ್ಕಿಳಿಸಿದೆ, ಬಲರಾಂಪುರ ಜಿಲ್ಲಾ ಪಂಚಾಯತ್ ಸದಸ್ಯೆ ಉದೇಶ್ವರಿ ಪೈಕ್ರಾ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಬಲರಾಂಪುರ ಜಿಲ್ಲೆಯ ಕುಸ್ಮಿ ಪ್ರದೇಶದಲ್ಲಿ ಚಿಂತಾಮಣಿ ಮಹಾರಾಜ್ ಭಾನುವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಬ್ರಿಜ್ ಮೋಹನ್ ಅಗರವಾಲ್ ಮತ್ತು ಪಕ್ಷದ ಮಾಜಿ ಮುಖ್ಯಸ್ಥ ವಿಷ್ಣುದೇವ್ ಸಾಯಿ ಭಾಗವಹಿಸಿದ್ದರು.

‘2024ರ ಲೋಕಸಭಾ ಚುನಾವಣೆಯಲ್ಲಿ ತಮ್ಮನ್ನು ಕಣಕ್ಕಿಳಿಸಲು ಬಿಜೆಪಿ ಸಿದ್ಧವಾಗಿದೆ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಅಂಬಿಕಾಪುರದಿಂದ ಸ್ಪರ್ಧಿಸಲು ಬಯಸಿದ್ದೇನೆ’ ಎಂದು ಮಹಾರಾಜ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT