ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರವೂ ದಟ್ಟ ಮಂಜಿನ ಪರದೆ ಆವರಿಸಿದ್ದು, ಕಡಿಮೆ ಗೋಚರತೆ ಸಮಸ್ಯೆಯಿಂದಾಗಿ ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾದವು.

ದಟ್ಟ ಮಂಜಿನಿಂದಾಗಿ ಸುಮಾರು 45 ರೈಲುಗಳ ಓಡಾಟದಲ್ಲಿ ತಡವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
.ದೆಹಲಿ | ದಟ್ಟ ಮಂಜು: 100ಕ್ಕೂ ಅಧಿಕ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಸಫ್ದರ್ಜಂಗ್ನಲ್ಲಿ ಮಧ್ಯರಾತ್ರಿ 12.30ರಿಂದ 1.30ರ ನಡುವೆ ಕನಿಷ್ಠ ಗೋಚರತೆ 50 ಮೀಟರ್ ಇತ್ತು. ಬಳಿಕ ಅದು 200 ಮೀಟರ್ಗೆ ಏರಿಕೆಯಾಯಿತು. ಬೆಳಿಗ್ಗೆ 7.30ವರೆಗೆ ಅದೇ ಪರಿಸ್ಥಿತಿ ಇತ್ತು ಎಂದು ಅವರು ತಿಳಿಸಿದ್ದಾರೆ.

ಬೆಳಿಗ್ಗೆ ಹಲವು ಪ್ರದೇಶಗಳಲ್ಲಿ ದಟ್ಟ ಮಂಜು ಆವರಿಸಿಕೊಂಡಿತ್ತು. ತಾಪಮಾನ 7.7 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದೆ.

ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆಯನ್ನೂ ಹವಾಮಾನ ಇಲಾಖೆ ನೀಡಿದೆ. ಗರಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಇರಬಹುದು ಎಂದು ಅದು ಅಂದಾಜಿಸಿದೆ.
.ದೆಹಲಿಯಲ್ಲಿ 2ನೇ ದಿನವೂ ದಟ್ಟ ಮಂಜು: 400 ವಿಮಾನಗಳ ಸಂಚಾರ ವ್ಯತ್ಯಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.