ನವದೆಹಲಿ: ದೆಹಲಿಯಲ್ಲಿ ದಟ್ಟ ಮಂಜು ಆವರಿಸಿದ್ದು ಕಡಿಮೆ ಗೋಚರತೆಯಿಂದಾಗಿ 100ಕ್ಕೂ ಅಧಿಕ ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ.
.ದೆಹಲಿ | ದಟ್ಟ ಮಂಜು: 170 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ.
‘ದಟ್ಟ ಮಂಜಿನಿಂದಾಗಿ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ ಸಂಭವಿಸಿದೆ. CAT III ಸಾಮರ್ಥ್ಯದ ವಿಮಾನಗಳು ಮಾತ್ರ ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಹಾಗೂ ಟೇಕಾಫ್ ಆಗುತ್ತಿವೆ. ವಿಮಾನ ಕಾರ್ಯಾಚರಣೆಯ ಸ್ಥಿತಿಗತಿ ಬಗ್ಗೆ ತಿಳಿದುಕೊಂಡು ಏರ್ಪೋರ್ಟ್ಗೆ ಹೋಗಿ’ ಎಂದು ಇಂಡಿಗೊ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.

CAT III ಸಾಮರ್ಥ್ಯದ ವಿಮಾನಗಳು ಕಡಿಮೆ ಗೋಚರತೆಯಲ್ಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುತ್ತವೆ.
.ಹೊಗೆ ಮಂಜು: ಸಮ–ಬೆಸ ಸಂಚಾರ ನಿಯಮ ಜಾರಿ ನಿರ್ಧಾರ ಹಿಂಪಡೆದ ದೆಹಲಿ ಸರ್ಕಾರ.
Flightradar.com ವೆಬ್ಸೈಟ್ನಲ್ಲಿರುವ ಮಾಹಿತಿ ಪ್ರಕಾರ 100ಕ್ಕೂ ಅಧಿಕ ವಿಮಾನಗಳ ಕಾರ್ಯಾಚರಣೆಯಲ್ಲಿ ಏರುಪೇರಾಗಿದೆ.

ವಿಮಾನಗಳ ಕಾರ್ಯಾಚರಣೆ ಬಗ್ಗೆ ವಿಮಾನಯಾನ ಕಂಪನಿಗಳ ಜೊತೆ ಸಂಪರ್ಕದಲ್ಲಿರಿ ಎಂದಿರುವ ದೆಹಲಿ ವಿಮಾನ ನಿಲ್ದಾಣವು, ಉಂಟಾದ ಸಮಸ್ಯೆಗೆ ಪ್ರಯಾಣಿಕರ ಕ್ಷಮೆ ಕೋರಿದೆ.

ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿನಿತ್ಯ ಸುಮಾರು 1,300 ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ.
.119 ವರ್ಷಗಳಲ್ಲಿ ದಾಖಲೆ ಕುಸಿತ ಕಂಡ ತಾಪಮಾನ: ಮಂಜು ಹೊದ್ದು ಮಲಗಿದ ದೆಹಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.