ನವದೆಹಲಿ: ಮನೆಯ ನಿಖರ ವಿಳಾಸ ತಿಳಿದುಕೊಳ್ಳಲು ಭಾರತೀಯ ಅಂಚೆ ಇಲಾಖೆಯು ಜಿಪಿಎಸ್ ಆಧಾರಿತ ‘ಡಿಜಿಪಿನ್’ ಆರಂಭಿಸಿದೆ.

ಈ ಸೇವೆಯನ್ನು ಮತ್ತಷ್ಟು ಪರಿಷ್ಕರಿಸುವ ನಿಟ್ಟಿನಲ್ಲಿ ನಾಗರಿಕರು, ವಿವಿಧ ಸಂಸ್ಥೆಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಇಲಾಖೆಯು ಮನವಿ ಮಾಡಿದೆ.

ಡಿಜಿಪಿನ್ ಸ್ಥಳದ ಮ್ಯಾಪಿಂಗ್ ಅನ್ನು ಸರಳೀಕರಿಸಿದ್ದು, ಕೊನೆಯ ಹಂತದವರೆಗೂ ಸರಕು ಪೂರೈಕೆ ಹಾಗೂ ತುರ್ತು ಸಂದರ್ಭದಲ್ಲಿ ನೆರವಾಗುವ ಉದ್ದೇಶವಿದೆ. ವಿಶೇಷವಾಗಿ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳನ್ನು ತ್ವರಿತ ಹಾಗೂ ನಿಖರವಾಗಿ ತಲುಪಲು ಸಹಾಯವಾಗಲಿದೆ. ಡಿಜಿಪಿನ್ (ಡಿಜಿಟಲ್ ಪೋಸ್ಟರ್ ಇಂಡೆಕ್ಸ್ ನಂಬರ್) ಅನ್ನು ಐಐಟಿ ಹೈದರಾಬಾದ್, ಎನ್ಆರ್ಎಸ್ಸಿ ಹಾಗೂ ಇಸ್ರೊ ನೆರವಿನೊಂದಿಗೆ ‘ಜಿಯೋ ಕೋಡ್ ಗ್ರಿಡ್‘ ಆಧರಿತ ಡಿಜಿಟಲ್ ವಿಳಾಸವನ್ನು ಅಭಿವೃದ್ಧಿಪಡಿಸಿದೆ.

ಅಂಚೆಗಳನ್ನು ತಲುಪಿಸುವ ಪ್ರಮುಖ ಆಧಾರಸ್ತಂಭವಾದ ಆರು ಅಂಕಿಗಳ ಪಿನ್ಕೋಡ್ ವ್ಯವಸ್ಥೆಯು 1972ರಲ್ಲಿ ಜಾರಿಗೆ ತರಲಾಗಿತ್ತು.

‘2022ರ ರಾಷ್ಟ್ರೀಯ ಭೂಗೋಳ ನೀತಿ’ಯಡಿಯಲ್ಲಿ ಅಂಚೆ ಇಲಾಖೆಯು ‘ಡಿಜಿ–ಪಿನ್ ತಿಳಿಯಿರಿ’, ‘ಪಿನ್ಕೋಡ್ ತಿಳಿಯಿರಿ’ ಸೇವೆಗೆ ಚಾಲನೆ ನೀಡಿತ್ತು. ಭಾರತೀಯ ಅಂಚೆ ಸೇವೆಯು ತನ್ನ ವೆಬ್ಸೈಟ್ನಲ್ಲಿ ಲಿಂಕ್ ಒದಗಿಸಿದ್ದು, ಸಾರ್ವಜನಿಕರು ಹೊಸ ಸೇವೆಯ ಕುರಿತು ಅಭಿಪ್ರಾಯಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

‘ಜನರ ಸಹಭಾಗಿತ್ವದಿಂದ ಸೇವೆಯಲ್ಲಿ ನಿರಂತರ ಪ್ರಗತಿ ಸಾಧಿಸುವ ಜೊತೆಗೆ ದೇಶದಾದ್ಯಂತ ಡಿಜಿಟಲ್ ವಿಳಾಸದ ವಿಶ್ವಾಸರ್ಹತೆ ಹೆಚ್ಚಿಸಲು ನೆರವಾಗಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.