ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುತಾತ್ಮ ಅಬ್ದುಲ್ ಹಮೀದ್ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವತ್ ಭಾಗಿ

Published 1 ಜುಲೈ 2024, 10:15 IST
Last Updated 1 ಜುಲೈ 2024, 10:15 IST
ಅಕ್ಷರ ಗಾತ್ರ

ಗಾಜೀಪುರ(ಉತ್ತರ ಪ್ರದೇಶ): ‘ಇಷ್ಟೊಂದು ವೈವಿಧ್ಯದ ಮಧ್ಯೆಯೂ ದೇಶವು ಸಾವಿರಾರು ವರ್ಷಗಳಿಂದ ಒಂದು ದೇಶವಾಗಿಯೇ ನಿಂತಿದೆ. ಪಾಕಿಸ್ತಾನ ಇರಬಹುದು ಚೀನಾ ಇರಬಹುದು, ಯಾರೇ ನಡೆಸಿದ ದಾಳಿಯನ್ನು ದೇಶವು ಒಂದುಗೂಡಿ ಎದುರಿಸಿದೆ’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಸೋಮವಾರ ಅಭಿಪ್ರಾಯಪಟ್ಟರು.

ಇಂಡಿಯಾ ಮತ್ತು ಪಾಕಿಸ್ತಾನದ ನಡುವೆ 1965ರಲ್ಲಿ ನಡೆದ ಯುದ್ಧದಲ್ಲಿ ಹುತಾತ್ಮರಾದ ಗಾಜೀಪುರದ ಅಬ್ದುಲ್‌ ಹಮೀದ್‌ ಅವರ ಕುರಿತ ‘ಮೇರೆ ಪಾಪಾ ಪರಂವೀರ್‌’ (ಪರಮ ವೀರನಾಗಿರುವ ನನ್ನ ತಂದೆ) ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವತ್‌ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಹಮೀದ್‌ ಅವರ ಶೌರ್ಯಕ್ಕೆ ಅವರಿಗೆ ಮರಣೋತ್ತರ ‘ಪರಮವೀರ ಚಕ್ರ’ವನ್ನು ನೀಡಿ ಗೌರವಿಸಲಾಗಿದೆ.

‘ನಾವು ಒಂದು ದೇಶ, ಒಂದು ಸಮಾಜದಂತೆ ಇದ್ದೇವೆ. ಪ್ರೀತಿ ಹಾಗೂ ದೇಶದ ಕುರಿತ ಭಕ್ತಿಯು ದೇಶದ ತುಂಬೆಲ್ಲಾ ಹರಡಿಕೊಂಡಿದೆ. ಹೊರಗೆನಿಂತು ನೋಡಿದಾಗ ಏನೇ ಕಾಣಬಹುದು. ಆದರೆ, ದೇಶದೆಲ್ಲೆಡೆ ಪ್ರೀತಿ ಮತ್ತು ದೇಶಭಕ್ತಿ ತುಂಬಿಕೊಂಡಿದೆ’ ಎಂದು ಹೇಳಿದರು.

ಹಮೀದ್‌ ಅವರ ಕುರಿತು ಹಮೀದ್‌ ಅವರ ಜೊತೆಗಿದ್ದ ಸೈನಿಕರು ಹೇಳಿದ ಕಥೆಗಳ ಗುಚ್ಛವೇ ಈ ಪುಸ್ತಕ. ಕಾರ್ಯಕ್ರಮದಲ್ಲಿ ಹಮೀದ್‌ ಅವರ ಮಗ ಜೈನುಲ್‌ ಹಸನ್‌ ಅವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT