ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶಿ: 21ಲಕ್ಷ ಮಣ್ಣಿನ ಹಣತೆಗಳಲ್ಲಿ ಬೆಳಗಿದ ದೀಪಗಳು! 70 ದೇಶಗಳ ರಾಯಭಾರಿಗಳು ಭಾಗಿ

Published 28 ನವೆಂಬರ್ 2023, 2:53 IST
Last Updated 28 ನವೆಂಬರ್ 2023, 2:53 IST
ಅಕ್ಷರ ಗಾತ್ರ

ವಾರಾಣಸಿ: ದೇವ್‌ ದೀಪಾವಳಿ ಹಿನ್ನೆಲೆಯಲ್ಲಿ ಕಾಶಿಯಲ್ಲಿ 21 ಲಕ್ಷಕ್ಕೂ ಹೆಚ್ಚು ಮಣ್ಣಿನ ಹಣತೆಗಳಲ್ಲಿ ದೀಪಗಳನ್ನು ಬೆಳಗಿಸಲಾಯಿತು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಸೋಮವಾರ ರಾತ್ರಿ ಮೊದಲ ದೀಪ ಬೆಳಗುವ ಮೂಲಕ ದೇವ್‌ ದೀಪಾವಳಿಗೆ ಚಾಲನೆ ನೀಡಿದರು.

ನಗರದ ಜನರು, ಪ್ರವಾಸಿಗರು ಸೇರಿದಂತೆ 70 ದೇಶಗಳ ರಾಯಭಾರಿಗಳು ಮತ್ತು 150 ಪ್ರತಿನಿಧಿಗಳು ಕುಟುಂಬ ಸಮೇತ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ದೇವ್ ದೀಪಾವಳಿಯ ಸಂದರ್ಭದಲ್ಲಿ ಕಾಶಿಯ ವೈಭವವನ್ನು ಪ್ರದರ್ಶಿಸಿತು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ದೇವ್‌ ದೀಪಾವಳಿಯನ್ನು ಕಾರ್ತಿಕ ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಹಿಂದೂ ತಿಂಗಳ ಕೊನೆಯ ಕಾರ್ತಿಕ ಹುಣ್ಣಿಮೆಯ ರಾತ್ರಿ ಕಾಶಿ ಘಾಟ್‌ಗಳಲ್ಲಿ ನಡೆಯುವ ದೇವ್‌ ದೀಪಾವಳಿಗೆ ಪ್ರತಿ ವರ್ಷವೂ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಾರೆ.

‘ದೇವ್‌ ದೀಪಾವಳಿಯಲ್ಲಿ ಬೆಳಗಿಸಿದ ದೀಪಗಳ ಪೈಕಿ ಸರ್ಕಾರವು ಗೋವಿನ ಸಗಣಿಯಿಂದ ಮಾಡಿದ ಒಂದು ಲಕ್ಷ ಸೇರಿದಂತೆ 12 ಲಕ್ಷ ದೀಪಗಳನ್ನು ಕೊಡುಗೆಯಾಗಿ ನೀಡಿತ್ತು. ಜತೆಗೆ ಸ್ವಯಂಸೇವಾ ಸಂಸ್ಥೆಗಳು ಮತ್ತು ಸಾರ್ವಜನಿಕ ಸಹಭಾಗಿತ್ವವು ಒಟ್ಟಾಗಿ 21 ಲಕ್ಷಕ್ಕೂ ಹೆಚ್ಚು ದೀಪಗಳು ಕಾಶಿಯನ್ನು ಬೆಳಕಿನ ಸಮುದ್ರವಾಗಿ ಪರಿವರ್ತಿಸಿತು’ ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT