ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿಹಾರ್‌ ಜೈಲು: ₹10 ಕೋಟಿ ಸುಲಿಗೆ ಆರೋಪ, ಡಿಜಿಪಿ ಸಂದೀಪ್‌ ಗೋಯಲ್‌ ವರ್ಗಾವಣೆ

Published : 4 ನವೆಂಬರ್ 2022, 13:11 IST
ಫಾಲೋ ಮಾಡಿ
Comments

ನವದೆಹಲಿ: ‘ಜೈಲಿನಲ್ಲಿ ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳಲು ನನ್ನಿಂದ ₹10 ಕೋಟಿ ಸುಲಿಗೆ ಮಾಡಲಾಗಿದೆ’ ಎಂದು ವಂಚಕ ಸುಕೇಶ್‌ ಚಂದ್ರಶೇಖರ್ ಆರೋಪಿಸಿದ ಬೆನ್ನಲ್ಲೇ ತಿಹಾರ್‌ ಜೈಲಿನ ಡಿಜಿಪಿ ಸಂದೀಪ್‌ ಗೋಯಲ್‌ ಅವರನ್ನು ವರ್ಗಾಯಿಸಲಾಗಿದೆ.

ಆ ಜಾಗಕ್ಕೆ ಐಪಿಎಸ್‌ ಅಧಿಕಾರಿ ಸಂಜಯ್‌ ಬೇನಿವಾಲ್‌ ಅವರನ್ನು ವರ್ಗಾಯಿಸಿ ಆದೇಶಿಸಲಾಗಿದೆ.

‘ಸಚಿವ ಹಾಗೂ ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖಂಡ ಸತ್ಯೇಂದರ್‌ ಜೈನ್‌ ಅವರು ನನ್ನಿಂದ ₹10 ಕೋಟಿ ಸುಲಿಗೆ ಮಾಡಿದ್ದಾರೆ. ಜೈಲಿನ ಡಿಜಿಪಿ ಸಂದೀಪ್‌ ಗೋಯಲ್‌ ಅವರಿಗೆ ₹1.5 ಕೋಟಿ ನೀಡುವಂತೆ ಅವರು ಹೇಳಿದ್ದರು’ ಎಂದು ಚಂದ್ರಶೇಖರ್ ಆರೋಪಿಸಿಸಿ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರಿಗೆ ಪತ್ರ ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT