ನವದೆಹಲಿ: ಅಮಾಯಕರ ಬ್ಯಾಂಕ್ ಖಾತೆಗಳನ್ನು ಅಕ್ರಮವಾಗಿ ಬಳಸಿಕೊಂಡು (ಮ್ಯೂಲ್ ಅಕೌಂಟ್) ಭಯೋತ್ಪಾದನೆ, ದೇಶವಿರೋಧಿ ಚಟುವಟಿಕೆಗಳಿಗೆ ಹಣವನ್ನು ವರ್ಗಾಯಿಸುತ್ತಿದ್ದ ಅತ್ಯಂತ ವ್ಯವಸ್ಥಿತ, ಅತ್ಯಾಧುನಿಕ ಸೈಬರ್ ವಂಚಕರ ಜಾಲವನ್ನು ಕೇಂದ್ರ ತನಿಖಾ ಸಂಸ್ಥೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭೇದಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಇಂತಹ 8 ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್ಗಳನ್ನು ಪತ್ತೆ ಹಚ್ಚಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಈ ಖಾತೆಗಳಿಂದ ಅಪಾರ ಪ್ರಮಾಣದಲ್ಲಿ ಹಣ ಅಕ್ರಮವಾಗಿ ವರ್ಗಾವಣೆ ಆಗಿರುವುದು ಕಂಡುಬಂದಿದೆ. ಭಯೋತ್ಪಾದಕ ಚಟುವಟಿಕೆಗಳಿಗೂ ಈ ಹಣ ದುರುಪಯೋಗ ಆಗಿರುವ ಸಾಧ್ಯತೆ ಇದೆ ಎಂದು ತನಿಖಾ ಸಂಸ್ಥೆ ಶಂಕೆ ವ್ಯಕ್ತಪಡಿಸಿದೆ.

ಸೈಬರ್ ಅಪರಾಧದ ಸರಪಳಿಯಲ್ಲಿ ಮ್ಯೂಲ್ ಅಕೌಂಟ್ಗಳನ್ನು ‘ಅತ್ಯಂತ ದುರ್ಬಲ ಆದರೆ, ನಿರ್ಣಾಯಕ ಕೊಂಡಿ ಎನ್ನಲಾಗುತ್ತದೆ. ಈ ಖಾತೆಗಳಿಂದ ಹಣವನ್ನು ಅಕ್ರಮವಾಗಿ ವರ್ಗಾಯಿಸಿ, ಕ್ರಿಪ್ಟೊ ಕರೆನ್ಸಿಯಾಗಿ ಪರಿವರ್ತಿಸಿರುವ ಸಾಧ್ಯತೆಯೂ ಇದ್ದು, ಆ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

‘ಮ್ಯೂಲ್’ ಅಕೌಂಟ್ ಮೂಲಕ ನಡೆಯುವ ಆರ್ಥಿಕ ಅಪರಾಧಗಳನ್ನು ಪತ್ತೆ ಹಚ್ಚಲು ಕೇಂದ್ರ ತನಿಖಾ ಸಂಸ್ಥೆಯು ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಮತ್ತು ಇತರೆ ಕಾನೂನು ಜಾರಿ ನಿರ್ದೇಶನಾಲಯಗಳ ನೆರವು ಕೋರಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಅಕ್ರಮ ಹಣದ ಹರಿವು ತಡೆಯಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) 2017ರಲ್ಲಿ ಕಠಿಣ ಕ್ರಮ ಕೈಗೊಂಡ ನಂತರ, ದೇಶ ವಿರೋಧಿ ಶಕ್ತಿಗಳು ಸೈಬರ್ ವಂಚನೆಯ ಆಧುನಿಕ ಮಾದರಿಯಾದ ’ಡಿಜಿಟಲ್ ಹವಾಲ’ವನ್ನು ಬಳಸುತ್ತಿದ್ದಾರೆ. ಇದಕ್ಕಾಗಿ ಅಮಾಯಕರ ಬ್ಯಾಂಕ್ ಖಾತೆಗಳನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿದೆ.

Cut-off box - ‘ನಿಲುಗಡೆ ಖಾತೆಗಳು’ ಮ್ಯೂಲ್ ಅಕೌಂಟ್ಗಳನ್ನು ಸಂಕ್ಷಿಪ್ತವಾಗಿ ’ನಿಲುಗಡೆ ಖಾತೆಗಳು’ ಎಂದು ಕರೆಯಲಾಗುತ್ತದೆ. ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯನ್ನು ಅವರ ಅರಿವಿಗೆ ಬಾರದಂತೆ ನಿರ್ದಿಷ್ಟ ಸಮಯದವರೆಗೆ ಹಣವನ್ನು ಹಾಕಲು ಮತ್ತು ವರ್ಗಾವಣೆ ಮಾಡಲು ಮಾತ್ರ ಬಳಸಿಕೊಳ್ಳಲಾಗುತ್ತದೆ. ನಕಲಿ ಲಿಂಕ್ಗಳನ್ನು ಕಳುಹಿಸಿ ಅಥವಾ ಹೆಚ್ಚಿನ ಲಾಭದ ಆಸೆ ತೋರಿಸಿ ಅಮಾಯಕರ ಬ್ಯಾಂಕ್ ಖಾತೆಗಳ ಮೇಲಿನ ಸಂಪೂರ್ಣ ಹಿಡಿತವನ್ನು ಸೈಬರ್ ವಂಚಕರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ಮ್ಯೂಲ್ ಅಕೌಂಟ್ಗಳನ್ನು ಪತ್ತೆ ಹಚ್ಚಿದರೂ ಅದರ ಹಿಂದಿನ ಸೈಬರ್ ವಂಚಕರನ್ನು ಪತ್ತೆ ಹಚ್ಚುವುದು ಸವಾಲು ಎನ್ನುತ್ತಾರೆ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.