ಈ ಘಟನೆ ಖಂಡಿಸಿ ಹಾಗೂ ಸರ್ಕಾರದ ವೈಪಲ್ಯ ಬಗ್ಗೆ ಬಿಜೆಪಿ ಶಾಸಕರು ಆಗಸ್ಟ್ 14ರಂದು ಕೋಲ್ಕತ್ತದಲ್ಲಿ ಧರಣಿ ನಡೆಸಲಿದ್ದಾರೆ ಎಂದು ಸುವೇಂದು ಅಧಿಕಾರಿ ಹೇಳಿದರು.
ಇದೇ ವೇಳೆ ಈ ಘಟನೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾಳದಾದ್ಯಂತ ಕಿರಿಯ ವೈದ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು. ಮೃತ ವೈದ್ಯೆಯ ಪೋಷಕರನ್ನು ಭೇಟಿ ಮಾಡಿದ ಮಮತಾ ಬ್ಯಾನರ್ಜಿ ಅವರಿಗೆ ಸಾಂತ್ವಾನ ಹೇಳಿದರು. ನಂತರ ಆಗಸ್ಟ್ 18ರ ಒಳಗೆ ಪ್ರಕರಣದ ಪ್ರಮುಖ ತಪ್ಪಿತಸ್ಥರನ್ನು ಬಂಧಿಸುವಂತೆ ಅವರು ಪೋಲಿಸರಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.