ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ: ಬಂಗಾಳಿ ಸಿನಿರಂಗದ ಪ್ರಮುಖರಿಂದ ಅಹೋರಾತ್ರಿ ಧರಣಿ

Published 2 ಸೆಪ್ಟೆಂಬರ್ 2024, 5:19 IST
Last Updated 2 ಸೆಪ್ಟೆಂಬರ್ 2024, 5:19 IST
ಅಕ್ಷರ ಗಾತ್ರ

ಕೋಲ್ಕತ್ತ: ಇಲ್ಲಿನ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ಬಂಗಾಳಿ ಚಿತ್ರರಂಗದ ಹಲವು ಪ್ರಮುಖರು ಹಾಗೂ ವಿವಿಧ ಸಂಘಟನೆಗಳು ಸೋಮವಾರ ಮುಂಜಾನೆ 4 ಗಂಟೆಯವರೆಗೆ ಅಹೋರಾತ್ರಿ ಧರಣಿ ನಡೆಸಿದರು.

ಸಂತ್ರಸ್ತೆ ಮತ್ತು ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಕಾರರರು ಆಗ್ರಹಿಸಿದರು.

ಘಟನೆ ಖಂಡಿಸಿ ಭಾನುವಾರ ನಗರದಲ್ಲಿ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆ, ರ್‍ಯಾಲಿಗಳನ್ನು ನಡೆಸಿದವು. ಒಂದೆಡೆ ‘ಮಹಾಮಿಚಿಲ್‌’ ಪ್ರತಿಭಟನೆ ನಡೆದರೆ, ರಾಮಕೃಷ್ಣ ಮಿಷನ್‌ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳು ಮತ್ತೊಂದೆಡೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಕರಣದ ತ್ವರಿತ ತನಿಖೆ ಹಾಗೂ ಅಪರಾಧಿಗಳ ಬಂಧನಕ್ಕೆ ಆಗ್ರಹಿಸಿ ಸೋಮವಾರ ಬೆಳಿಗ್ಗೆ ತನಕ ಅಲ್ಲಿಯೇ ಇರುವುದಾಗಿ ಪ್ರತಿಭಟನಕಾರರರು ಪ್ರತಿಜ್ಞೆ ಮಾಡಿದ್ದರು.

ನಮ್ಮ ಬೇಡಿಕೆಯನ್ನು ಪರಿಹರಿಸಲು ನಾವು ಆಡಳಿತಕ್ಕೆ 4 ಗಂಟೆಗಳ ಗಡುವು ನೀಡಿದ್ದೇವೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಗಳಿಗೆ ಪ್ರತ್ಯೇಕ ಮೇಲ್‌ಗಳನ್ನು ಕಳುಹಿಸಿದ್ದೇವೆ. ಆದರೆ ರಾಜ್ಯದ ಒಬ್ಬ ಪ್ರತಿನಿಧಿಯೂ ಪ್ರತಿಕ್ರಿಯಿಸಿಲ್ಲ. ಮತ್ತು ಸ್ಥಳಕ್ಕೆ ಬಂದಿಲ್ಲ ಎಂದು ನಿರ್ದೇಶಕ ಬಿರ್ಸಾ ದಾಸ್‌ಗುಪ್ತ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT