ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಫಿಯಾ ಪೋಷಕರಿಂದ ಪ್ರಮಾಣ ಪತ್ರ ಪಡೆಯುವ ಅಗತ್ಯ ಬಿಜೆಪಿಗಿಲ್ಲ: ಭೂಪೇಂದ್ರ ಸಿಂಗ್‌

Published 10 ಜೂನ್ 2023, 2:12 IST
Last Updated 10 ಜೂನ್ 2023, 2:12 IST
ಅಕ್ಷರ ಗಾತ್ರ

ಲಖನೌ: ‘ಮಾಫಿಯಾ, ಭಯೋತ್ಪಾದನೆಗಳಂತಹ ರಾಕ್ಷಸ ಕೃತ್ಯಗಳನ್ನು ಪೋಷಿಸುವ ಜನರಿಂದ ಪ್ರಮಾಣಪತ್ರ ಪಡೆಯುವ ಅಗತ್ಯ ನಮಗೆ(ಬಿಜೆಪಿ) ಬಂದಿಲ್ಲ‘ ಎಂದು ಉತ್ತರ ಪ್ರದೇಶದ ಬಿಜೆಪಿ ಮುಖಂಡ ಭೂಪ್ರೇಂದ್ರ ಸಿಂಗ್‌ ಚೌಧರಿ ಸಮಾಜವಾದಿ ಪಕ್ಷದ ನಾಯಕ ರಾಮ್‌ ಗೋಪಾಲ್‌ ಯಾದವ್‌ ಅವರಿಗೆ ತಿರುಗೇಟು ನೀಡಿದ್ದಾರೆ.

ಸಮಾಜವಾದಿ ಪಕ್ಷದ ಕಾರ್ಯಕರ್ತರಿಗಾಗಿ ಸೀತಾಪುರದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಮ್ ಗೋಪಾಲ್‌ ಯಾದವ್‌, ‘ನೈಮಿಷಾರಣ್ಯದಲ್ಲಿ ನಡೆಯುತ್ತಿರುವ ಈ ತರಬೇತಿ ಶಿಬಿರ ರಾಕ್ಷಸರ ನಾಶಕ್ಕೆ ನಾಂದಿ ಹಾಡಲಿದೆ. ಬಿಜೆಪಿಯೊಂದಿಗೆ ಸಂಪರ್ಕದಲ್ಲಿರುವವರು ರಾಕ್ಷಸರಿಗಿಂತ ಕಡಿಮೆಯೇನೂ ಇಲ್ಲ‘ ಎಂದು ಹೇಳಿದ್ದರು.

ಯಾದವ್‌ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಭೂಫೇಂದ್ರ ಸಿಂಗ್‌ ಚೌಧರಿ, ‘ಮಾಫಿಯಾ ದೊರೆಗಳು, ಅಪರಾಧಿಗಳು ಮತ್ತು ಭಯೋತ್ಪಾದಕರಂತಹ ರಾಕ್ಷಸರ ಪೋಷಕರಾಗಿರುವ ಜನರಿಂದ ಪ್ರಮಾಣಪತ್ರ ಅಗತ್ಯ ಬಿಜೆಪಿಗೆ ಇಲ್ಲ‘ ಎಂದು ಹೇಳಿದರು.

‘ಸಮಾಜವಾದದ ಹೆಸರಿನಲ್ಲಿ ಕುಟುಂಬ ರಾಜಕಾರಣ ಮಾಡಿಕೊಂಡು ಬರುತ್ತಿರುವುದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ‘ ಎಂದು ಕುಟುಕಿದರು.

’ನಿಮ್ಮ ಪಕ್ಷದ ಆಡಳಿತಾವಧಿಯಲ್ಲಿ (ಸಮಾಜವಾದಿ ಪಕ್ಷ) ಭ್ರಷ್ಟಾಚಾರ, ಅಪರಾಧ, ಮಹಿಳೆಯರಿಗೆ ರಕ್ಷಣೆಯಿಲ್ಲದಿರುವುದು, ಬಡವರ ಮೇಲೆ ದಬ್ಬಾಳಿಕೆ, ಶೋಷಣೆಗಳು ಉತ್ತರ ಪ್ರದೇಶದ ಗುರುತಾಗಿದ್ದವು. ಈಗ ಜೈಲಿನಲ್ಲಿರುವ ಮಾಫಿಯಾ ದೊರೆಗಳು ನಿಮ್ಮ ಆಡಳಿತಾವಧಿಯಲ್ಲಿ ನಿರ್ಭೀತಿಯಿಂದ ಬೀದಿಯಲ್ಲಿ ಸುತ್ತಾಡುತ್ತಿದ್ದರು‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT