ಮುಂಬೈ: ಬಾಲಿವುಡ್ ಡ್ರಗ್ಸ್ ಜಾಲದಡಿ ಬಂಧಿಸಲಾಗಿದ್ದ ಧರ್ಮಾಟಿಕ್ ಎಂಟರ್ಟೈನ್ಮೆಂಟ್ನ ಮಾಜಿ ಕಾರ್ಯನಿರ್ವಾಹಕ ನಿರ್ಮಾಪಕಕ್ಷಿತಿಜ್ ರವಿ ಪ್ರಸಾದ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಎನ್ಡಿಪಿಎಸ್ ವಿಶೇಷ ನ್ಯಾಯಾಲಯವು ಅ.6 ತನಕ ವಿಸ್ತರಿಸಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ಪ್ರಕರಣ ಸಂಬಂಧಿತ ಡ್ರಗ್ಸ್ ಜಾಲದಡಿ ರವಿ ಪ್ರಸಾದ್ ಅವರನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಆರೋಪಿ ಕರ್ಮಜೀತ್ ಅವರೊಂದಿಗೆ ಸೇರಿ ರವಿ ಪ್ರಸಾದ ಡ್ರಗ್ಸ್ ಶೇಖರಣೆ ಮಾಡಿದ್ದರು ಎಂದು ನ್ಯಾಯಾಲಯಕ್ಕೆ ಎನ್ಸಿಬಿ ತಿಳಿಸಿತ್ತು.
ರವಿ ಪ್ರಸಾದ್ ಕಸ್ಟಡಿ ಅವಧಿ ಪೂರ್ಣಗೊಂಡ ಕಾರಣ ಅವರನ್ನು ಶನಿವಾರ ಎನ್ಡಿಪಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯವು ರವಿ ಪ್ರಸಾದ್ ನ್ಯಾಯಾಂಗ ಬಂಧನವನ್ನು ಅ.6 ತನಕ ವಿಸ್ತರಿಸಿದೆ.