ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈ ಮೂಲದ ಭಕ್ತರೊಬ್ಬರಿಂದ ತಿರುಪತಿಯ ವೆಂಕಟೇಶ್ವರ ದೇಗುಲಕ್ಕೆ ₹ 1 ಕೋಟಿ ಕಾಣಿಕೆ

Last Updated 25 ಮಾರ್ಚ್ 2022, 7:52 IST
ಅಕ್ಷರ ಗಾತ್ರ

ತಿರುಪತಿ: ದುಬೈ ಮೂಲದ ಭಕ್ತರೊಬ್ಬರು ಶುಕ್ರವಾರ ತಿರುಮಲದ ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನಕ್ಕೆ ₹ 1 ಕೋಟಿ ಕಾಣಿಕೆಯನ್ನು ಸಲ್ಲಿಸಿದ್ದಾರೆ ಎಂದು ದೇಗುಲದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಡವರು ಮತ್ತು ನಿರ್ಗತಿಕರಿಗೆ ಸೇವೆ ಸಲ್ಲಿಸಲು ಉದ್ದೇಶಿಸಿರುವ ಟಿಟಿಡಿ ಕಲ್ಯಾಣ ಟ್ರಸ್ಟ್‌ಗಳಲ್ಲಿ ಯಾವುದಾದರೂಂದು ಕಾರ್ಯಕ್ರಮಕ್ಕೆ ಹಣವನ್ನು ಬಳಸಿಕೊಳ್ಳುವಂತೆ ಅವರು ದೇವಾಲಯದ ಆಡಳಿತ ಮಂಡಳಿಗೆ ವಿನಂತಿ ಮಾಡಿದ್ದಾರೆ.

ದುಬೈನಲ್ಲಿ ಲೆಕ್ಕ ಪರಿಶೋಧಕರಾಗಿರುವ ಎಂ ಹನುಮಂತಕುಮಾರ್ ಅವರು ಶುಕ್ರವಾರ ದೇಗುಲದಲ್ಲಿ ಪೂಜಾಕೈಂಕರ್ಯ ಮುಗಿದ ಬಳಿಕ ಡಿಮ್ಯಾಂಡ್ ಡ್ರಾಫ್ಟ್ ಮೂಲಕ 1 ಕೋಟಿಯನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧ್ಯಕ್ಷ ವೈ ವಿ ಸುಬ್ಬಾ ರೆಡ್ಡಿಗೆ ಹಸ್ತಾಂತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT