ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪಕ್ಷಗಳ ಹಣಕಾಸು ದಾಖಲೆ ಪತ್ರಕ್ಕೆ ಇ.ಸಿ ಪೋರ್ಟಲ್‌

Published 3 ಜುಲೈ 2023, 21:28 IST
Last Updated 3 ಜುಲೈ 2023, 21:28 IST
ಅಕ್ಷರ ಗಾತ್ರ

ನವದೆಹಲಿ: ನೋಂದಾಯಿತ ರಾಜಕೀಯ ಪಕ್ಷಗಳ ಹಣಕಾಸು ವ್ಯವಹಾರಗಳಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ಪ್ರಯತ್ನವಾಗಿ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ತಮ್ಮ ಹಣಕಾಸು ವ್ಯವಹಾರಗಳ ಲೆಕ್ಕಪತ್ರಗಳನ್ನು ಆನ್‌ಲೈನ್‌ನಲ್ಲಿ  ಸಲ್ಲಿಸಲು ಸೋಮವಾರ ಪೋರ್ಟಲ್ ಪ್ರಾರಂಭಿಸಿದೆ.

ರಾಜಕೀಯ ಪಕ್ಷಗಳು ಸ್ವೀಕರಿಸುವ ದೇಣಿಗೆಯ ವಿವರಗಳು, ವಾರ್ಷಿಕ ಲೆಕ್ಕಪರಿಶೋಧನಾ ವರದಿಗಳು, ಚುನಾವಣಾ ವೆಚ್ಚ ಸೇರಿದಂತೆ ತಮ್ಮ ಹಣಕಾಸು ವಹಿವಾಟುಗಳ ವಿವರಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸಲು ಈ ಪೋರ್ಟಲ್‌ ಅನುಕೂಲ ಕಲ್ಪಿಸಲಿದೆ. 

ಆನ್‌ಲೈನ್ ವಿಧಾನದ ಮೂಲಕ ಹಣಕಾಸು ವರದಿ ಸಲ್ಲಿಸಲು ಇಚ್ಛಿಸದ ರಾಜಕೀಯ ಪಕ್ಷಗಳು ಅದಕ್ಕೆ ಕಾರಣಗಳನ್ನು ಬಹಿರಂಗಪಡಿಸಬೇಕು. ಸಿ.ಡಿ ಅಥವಾ ಪೆನ್‌ಡ್ರೈವ್ ಜೊತೆಗೆ ಹಾರ್ಡ್ ಕಾಪಿ ರೂಪದಲ್ಲಿ ವರದಿಗಳನ್ನು ಸಲ್ಲಿಸುವುದು ಮುಂದುವರಿಯಲಿದೆ. ಇದಕ್ಕೆ ಪ್ರತಿಯಾಗಿ ಆಯೋಗವು ಅಂತಹ ಎಲ್ಲ ವರದಿಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸುತ್ತದೆ. ಜೊತೆಗೆ ಯಾವುದೇ ಹಣಕಾಸಿನ ಹೇಳಿಕೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸದೆ, ಪಕ್ಷವು ಕಳುಹಿಸಿದ ಸಮರ್ಥನೆಯ ಪತ್ರವನ್ನು ಸಹ ಪ್ರಕಟಿಸಲಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT