ನವದೆಹಲಿ: ಬ್ರಿಟನ್ ಮೂಲದ ಶಸ್ತ್ರಾಸ್ತ್ರಗಳ ದಲ್ಲಾಳಿ ಸಂಜಯ್ ಭಂಡಾರಿ ಅವರೊಂದಿಗಿನ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ (ED) ಆರೋಪ ಪಟ್ಟಿ ಸಲ್ಲಿಸಿದೆ.

ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ವಿಶೇಷ ನ್ಯಾಯಾಲಯದಲ್ಲಿ ಈ ಕುರಿತು ಪ್ರಾಸಿಕ್ಯೂಷನ್ ದೂರು ಸಲ್ಲಿಸಿತ್ತು. ವಾದ್ರಾ ವಿರುದ್ಧ ಸಲ್ಲಿಕೆಯಾಗಿರುವ ಎರಡನೇ ಹಣ ಅಕ್ರಮ ವರ್ಗಾವಣೆ ಪ್ರಕರಣವಿದು. ಹರಿಯಾಣದ ಶಿಕೋಪುರ್ನ ಜಮೀನು ಖರೀದಿಯಲ್ಲಿ ಹಣದ ಅಕ್ರಮ ವರ್ಗಾವಣೆ ನಡೆದಿದೆ ಎಂಬ ಆರೋಪದಡಿ ಕಳೆದ ಜುಲೈನಲ್ಲಿ ವಾದ್ರಾ ವಿರುದ್ಧ ದೂರು ದಾಖಲಾಗಿತ್ತು.

ಸಂಜಯ್ ಭಂಡಾರಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಾದ್ರಾ ಅವರನ್ನು ಈಗಾಗಲೇ ವಿಚಾರಣೆ ನಡೆಸಿದ್ದಾರೆ.

ಪರಾರಿಯಾದ ಆರ್ಥಿಕ ಅಪರಾಧಿ ಎಂದು ದೆಹಲಿ ನ್ಯಾಯಾಲಯದಿಂದ ಘೋಷಿತ ಸಂಜಯ್ ಅವರನ್ನು ವಶಕ್ಕೆ ಪಡೆಯುವ ಜಾರಿ ನಿರ್ದೇಶನಾಲಯದ ಕೋರಿಕೆಯನ್ನು ಬ್ರಿಟನ್ ನ್ಯಾಯಾಲಯ ನಿರಾಕರಿಸಿದೆ.

ದೆಹಲಿಯಲ್ಲಿರುವ ಸಂಜಯ್ಗೆ ಸೇರಿದ ಜಾಗಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಶಸ್ತ್ರಾಸ್ತ್ರಗಳ ದಲ್ಲಾಳಿಯಾಗಿರುವ 63 ವರ್ಷದ ಸಂಜಯ್ ಈ ಘಟನೆ ನಂತರ ದೇಶ ತೊರೆದು, ಲಂಡನ್ನಲ್ಲಿ ನೆಲೆಸಿದ್ದಾರೆ.

ಕಪ್ಪು ಹಣ ವಿರೋಧಿ ಕಾಯ್ದೆಡಿ ಆದಾಯ ತೆರಿಗೆ ಇಲಾಖೆಯು ಸಲ್ಲಿಸಿದ್ದ ಆರೋಪಪಟ್ಟಿಯನ್ನು ಆಧರಿಸಿ 2017ರಲ್ಲಿ ಭಂಡಾರಿ ಹಾಗೂ ಇತರರ ವಿರುದ್ಧ ಜಾರಿ ನಿರ್ದೇಶನಾಲಯವು ಕ್ರಿಮಿನಲ್ ಪ್ರಕರಣದ ದಾಖಲಿಸಿದೆ. ಲಂಡನ್ನಲ್ಲಿರುವ ಮನೆಗೆ ಸಂಬಂಧಿಸಿದಂತೆ ಸಂಜಯ್ ಮತ್ತು ರಾಬರ್ಟ್ ಅವರನ್ನು ಜಾರಿ ನಿರ್ದೇಶನಾಲಯ ಈಗಾಗಲೇ ಪ್ರಶ್ನಿಸಿದೆ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಲಂಡನ್ನಲ್ಲಿ ಯಾವುದೇ ಆಸ್ತಿ ಹೊಂದಿರುವುದನ್ನು ವಾದ್ರಾ ನಿರಾಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.