ನವದೆಹಲಿ: ರೂಪದರ್ಶಿಯರ ಅಶ್ಲೀಲ ಚಿತ್ರಗಳನ್ನು ವೆಬ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿ, ಅದನ್ನು ಅಶ್ಲೀಲ ಸೈಟ್ಗಳಲ್ಲಿ ಪೋಸ್ಟ್ ಮಾಡಲು ವಿದೇಶಿ ಕಂಪನಿಗೆ ಮಾರಾಟ ಮಾಡಿದ ದಂಪತಿಗೆ ಸೇರಿದ ನೊಯಿಡಾದಲ್ಲಿರುವ ಜಾಗದ ಮೇಲೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

ಈ ದಂಪತಿ ತಮ್ಮ ಮನೆಯಲ್ಲಿ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದರು. ದಾಳಿ ಸಂದರ್ಭದಲ್ಲಿ ರೂಪದರ್ಶಿಯರು ಮನೆಯಲ್ಲಿ ಇದ್ದರು. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಇಡಿ ಪ್ರಕರಣ ದಾಖಲಿಸಿಕೊಂಡಿದೆ. ದೃಶ್ಯಗಳನ್ನು ಪ್ರಸಾರ ಮಾಡುತ್ತಿದ್ದ ಸಬ್ಡಿಜಿ ವೆಂಚರ್ಸ್ ಪ್ರೈವೇಟ್ ಕಂಪನಿ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.

ಈ ದಂಪತಿಯು ತಮ್ಮ ಮನೆಯಲ್ಲೇ ವೆಬ್ಕ್ಯಾಮ್ ಸ್ಟುಡಿಯೊ ಹೊಂದಿದ್ದರು. ಸಿಪ್ರಸ್ ಮೂಲದ ಟೆಕ್ನಿಯಸ್ ಲಿಮಿಟೆಡ್ ಕಂಪನಿಯು ಇವರಿಂದ ವಿಡಿಯೊಗಳನ್ನು ಖರೀದಿಸುತ್ತಿತ್ತು. ಇವುಗಳು ಎಕ್ಸ್ಹ್ಯಾಮಸ್ಟರ್ ಹಾಗೂ ಸ್ಟ್ರಿಪ್ಚಾಟ್ನಲ್ಲಿ ಪ್ರಸಾರ ಮಾಡಲಾಗುತ್ತಿತ್ತು ಎಂದು ಮೂಲಗಳು ಹೇಳಿವೆ.

ಇದಕ್ಕಾಗಿ ವಿದೇಶಗಳಿಂದ ಈ ದಂಪತಿಗೆ ಹಣ ಸಂದಾಯವಾಗುತ್ತಿತ್ತು. ಆದರೆ ಜಾಹೀರಾತು, ಮಾರುಕಟ್ಟೆ ಸಂಶೋಧನೆ ಮತ್ತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕಾಗಿ ಎಂದು ಸುಳ್ಳು ಲೆಕ್ಕ ನೀಡಿ ಇವರು ಹಣ ಪಡೆಯುತ್ತಿದ್ದರು. ಇವರ ಖಾತೆಯಲ್ಲಿ ₹15.66 ಕೋಟಿ ನಗದು ಈಗಲೂ ಇದೆ ಎಂದು ಇಡಿ ಮೂಲಗಳು ತಿಳಿಸಿವೆ.

‘ಬಂದ ಹಣದಲ್ಲಿ ಈ ದಂಪತಿ ತಮ್ಮ ಬಳಿ ಶೇ 75ರಷ್ಟು ಇಟ್ಟುಕೊಂಡು ಉಳಿದಿದ್ದನ್ನು ರೂಪದರ್ಶಿಯರಿಗೆ ನೀಡುತ್ತಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ನೀಡಿ ರೂಪದರ್ಶಿಯರನ್ನು ಇವರು ಸೆಳೆಯುತ್ತಿದ್ದರು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.