ನನವದೆಹಲಿ: ಚುನಾವಣೆಗಳ ಸಮಯದಲ್ಲಿ ಜಾರಿ ಜಾರಿ ನಿರ್ದೇಶನಾಲಯ (ಇ.ಡಿ) ವಿರೋಧ ಪಕ್ಷಗಳ ನಾಯಕರ ವಿರುದ್ಧ ಏಕೆ ಕ್ರಮಕೈಗೊಳ್ಳುತ್ತದೆ ಎಂದು ಸಂಸದ ಕಪಿಲ್ ಸಿಬಲ್ ಶನಿವಾರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಇ.ಡಿ ನಡೆಸಿದ ದಾಳಿಯ ಹಿಂದಿನ ಉದ್ದೇಶ ಬಹಿರಂಗವಾಗಿದೆ. ಇದು ಕೇವಲ ವಿರೋಧ ಪಕ್ಷದ ನಾಯಕರ ಮೇಲಿನ ಕಿರುಕುಳವಾಗಿದೆ. ವಿಧಾನಸಭಾ ಚುನಾವಣೆಯ ಸಮಯದಲ್ಲಿ ಜಾರ್ಖಂಡ್ನಲ್ಲಿ ಹೇಮಂತ್ ಸೊರೇನ್ ಮತ್ತು ಬಿಹಾರದಲ್ಲಿ ಲಾಲು ಪ್ರಸಾದ್ ಮತ್ತು ತೇಜಸ್ವಿ ಯಾದವ್ ವಿರುದ್ಧ ತನಿಖಾ ಸಂಸ್ಥೆಯ ಕ್ರಮವು ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
.ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಿಗೆ ದೂರುಗಳ ಸುರಿಮಳೆ .ಕಲ್ಟ್ ಚಿತ್ರದ ‘ಹೃದಯವೂ ಕೇಳದೆ’ ಹಾಡಿಗೆ ಪಂಜಾಬಿ ಗಾಯಕ ಜಸ್ಕರಣ್ ಸಿಂಗ್ ಮೆಚ್ಚುಗೆ .
ತನಿಖಾ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯ ಬಗ್ಗೆ ಬಾಕಿ ಇರುವ ಪರಿಶೀಲನಾ ಅರ್ಜಿಗಳನ್ನು ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಅನ್ನು ಸಿಬಲ್ ಕೋರಿದ್ದಾರೆ.

ಈ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಸುಳ್ಳು ಮಾಹಿತಿಯ ಆಧಾರದ ಮೇಲೆ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕನ ವಿರುದ್ಧ ಕಾನೂನು ಕ್ರಮ ಜರುಗಿಸಿಲ್ಲ. 2004 ಮತ್ತು 2014ರ ನಡುವೆ ಜಾರಿ ನಿರ್ದೇಶನಾಲಯ ಆ ರೀತಿ ಮಾಡಲು ಬಿಟ್ಟಿರಲಿಲ್ಲ ಎಂದು ಸಿಬಲ್ ತಿಳಿಸಿದ್ದಾರೆ.
.ಟಾಕ್ಸಿಕ್ ಟೀಸರ್ ರೀಮೇಕ್: ಎಚ್ಡಿಕೆ ಮತ್ತೆ ರಾಜ್ಯ ಕಬ್ಜಾ ಮಾಡ್ಕೊಳ್ಳೋ ಸಂದೇಶವಾ?.ಭೂ ವೀಕ್ಷಣಾ ಉಪಗ್ರಹ ಉಡ್ಡಯನ ಯಶಸ್ಸಿಗಾಗಿ ತಿರುಪತಿಯಲ್ಲಿ ‘ಇಸ್ರೊ’ ಅಧ್ಯಕ್ಷ ಪೂಜೆ.
ಇ.ಡಿ ದೇವರಂತೆ ಸರ್ವವ್ಯಾಪಿ. ಇ.ಡಿ ಕೇಂದ್ರ ಬಿಜೆಪಿ ಸರ್ಕಾರದ ದೇವರು. ಹೀಗಾಗಿ ಅವರು ಏನು ಬೇಕಾದರೂ ಮಾಡಬಹುದು. ಸಿಬಿಐ ಕೂಡ ಹಾಗೆಯೇ ಎಂದು ಸಿಬಲ್ ಟೀಕಿಸಿದ್ದಾರೆ.

ಜಾರಿ ನಿರ್ದೇಶನಾಲಯವನ್ನು ರಚಿಸಿದಾಗ, ಅದು ದೇಶದ ಯಾವುದೇ ಸ್ಥಳಕ್ಕೆ, ಯಾವುದೇ ಸಮಯದಲ್ಲಿ ಹೋಗಬಹುದಾದ ಸರ್ವವ್ಯಾಪಿ ವಿಚಾರಣೆ ಸಂಸ್ಥೆಯಾಗಿದೆ ಎಂದು ನಮಗೆ ತಿಳಿದಿರಲಿಲ್ಲ. ಈ ಸಂಸ್ಥೆಗಳು ಸರ್ಕಾರಗಳ ಮೇಲೆ ದಾಳಿ ಮಾಡಬಹುದು, ರಾಜಕೀಯ ನಾಯಕರ ನಿವಾಸ ಮತ್ತು ಕಚೇರಿಗಳ ದಾಳಿ ಮಾಡಿ, ಅವರ ಸರ್ಕಾರಗಳನ್ನು ಬೀಳಿಸಬಹುದಾದ ಅಧಿಕಾರ ಹೊಂದಿದೆಯೇ ಇಲ್ಲವೋ ತಿಳಿದಿಲ್ಲ ಎಂದು ಸಿಬಲ್ ಕಿಡಿಕಾರಿದ್ದಾರೆ.
.ದೂದ್ ಪೇಡಾ ದಿಗಂತ್ಗೆ ಹೆಂಡತಿಯಾದ ಸಮಂತಾ; ‘ಮಾ ಇಂಟಿ ಬಂಗಾರಂ’ ಟ್ರೇಲರ್ ಬಿಡುಗಡೆ.ತಾಷ್ಕೆಂಟ್ ಒಪ್ಪಂದಕ್ಕೆ 60 ವರ್ಷ: ಪ್ರಧಾನಿ ಶಾಸ್ತ್ರಿ ಸಾವಿಗೆ ಈಗಲೂ ಸಿಗದ ಕಾರಣ.ಐ–ಪ್ಯಾಕ್ ಮೇಲೆ ED ದಾಳಿ: ಬಂಗಾಳ ಸರ್ಕಾರದಿಂದ ಸುಪ್ರೀಂ ಕೋರ್ಟ್ಗೆ ಕೇವಿಯಟ್.ಕೊನೆಗೂ ನನಸಾಯ್ತು ಅಶ್ವಿನಿ ಗೌಡ, ಧ್ರುವಂತ್ ಕನಸು: ಕಿಚ್ಚನಿಂದ ಸಿಕ್ತು ಚಪ್ಪಾಳೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.