ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರು ದಾಖಲಿಸಿದ ಇ.ಡಿ, ಟಿಎಂಸಿ ನಾಯಕನ ಕುಟುಂಬ

Published 6 ಜನವರಿ 2024, 16:29 IST
Last Updated 6 ಜನವರಿ 2024, 16:29 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ದಾಳಿ ನಡೆಸಿದ ವೇಳೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳ ತಂಡದ ಮೇಲೆ  ಗುಂಪೊಂದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಟಿಎಂಸಿ ನಾಯಕ ಶಾಜಹಾನ್‌ ಶೇಖ್‌ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಶನಿವಾರ ಪರಸ್ಪರರ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದ ಇ.ಡಿ ಅಧಿಕಾರಿಗಳ ವಿರುದ್ಧ ಕಿರುಕುಳ, ಅನುಮತಿ ಇಲ್ಲದೆ ಮನೆಯೊಳಗೆ ಪ್ರವೇಶ ಮತ್ತು ಕಳವು ಆರೋಪದ ಮೇಲೆ ಪೊಲೀಸರು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿದ್ದಾರೆ.

ಶಾಜಹಾನ್‌ ಅವರು ದೇಶ ಬಿಟ್ಟು ಹೋಗಬಹುದೆಂದು ಎಣಿಸಿ ಅವರ ವಿರುದ್ಧ ಇ.ಡಿ ಲುಕ್‌ ಔಟ್‌ ನೋಟಿಸ್‌ ನೀಡಿದೆ.  ಪೊಲೀಸರು ಯಾವುದೇ ಸೂಚನೆ ನೀಡಿದೆ ಮನೆಯೊಳಗೆ ಪ್ರವೇಶಿಸಿ ದಾಳಿ ನಡೆಸಿದರೆಂದು ಶಾಜಹಾನ್‌ ಕುಟುಂಬ ಸದಸ್ಯರು ದೂರು ನೀಡಿದ್ದರೆ, ಅಧಿಕಾರಿಗಳನ್ನು ಥಳಿಸಿದ್ದಾರೆ ಎಂದು ಶಾಜಹಾನ್‌ ಮತ್ತು ಅವರ ಬೆಂಬಲಿಗರ ವಿರುದ್ಧ ಇ.ಡಿ ಕೂಡ ದೂರು ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT