ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್‌–ಉಲ್‌–ಫಿತ್ರ್‌: ಭಾರತ–ಪಾಕ್‌ ಯೋಧರ ಸಿಹಿ ವಿನಿಮಯ

Last Updated 3 ಮೇ 2022, 13:30 IST
ಅಕ್ಷರ ಗಾತ್ರ

ಜಮ್ಮು: ಇಲ್ಲಿನ ಅಂತರರಾಷ್ಟ್ರೀಯ ಗಡಿಯಲ್ಲಿನ ವಿವಿಧ ಗಡಿ ಚೌಕಿ(ಬಿಪಿಒ)ಗಳಲ್ಲಿ ಮಂಗಳವಾರ ಈದ್‌–ಉಲ್‌–ಫಿತ್ರ್‌ ಅಂಗವಾಗಿ ದೇಶದ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಸಿಬ್ಬಂದಿ ಹಾಗೂ ಪಾಕ್‌ ಯೋಧರು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು.

‘ಜಮ್ಮು ಪ್ರಾಂತ್ಯದ ಸಾಂಬಾ, ಕತುವಾ, ಆರ್‌.ಎಸ್‌.ಪುರ ಹಾಗೂ ಅಖ್ನೂರ್‌ ಸೆಕ್ಟರ್‌ನ ಎಲ್ಲ ಗಡಿ ಚೌಕಿಗಳಲ್ಲಿ ಗಡಿ ಭದ್ರತಾ ಪಡೆಗಳು (ಬಿಎಸ್‌ಎಫ್‌) ಹಾಗೂ ಪಾಕಿಸ್ತಾನದ ಯೋಧರು ಸೌಹಾರ್ದಯುತವಾಗಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು’ ಎಂದು ಬಿಎಸ್‌ಎಫ್‌ನ ಡಿಐಜಿ ಪಿ.ಎಸ್‌.ಸಂದು ತಿಳಿಸಿದರು.

‘ಬಿಎಸ್‌ಎಫ್‌ ಗಡಿಯಲ್ಲಿ ಶಾಂತಿಯುತ ಮತ್ತು ಸೌಹಾರ್ದ ವಾತಾವರಣ ಕಾಪಾಡುವುದರ ಜತೆಗೆ ಗಡಿ ಪ್ರದೇಶದಲ್ಲಿ ಪ್ರಾಬಲ್ಯವನ್ನು ಹೊಂದಿದ್ದು, ಇಂತಹ ಕ್ರಮಗಳಿಂದ ಗಡಿಯಲ್ಲಿ ಎರಡು ಪಡೆಗಳ ನಡುವೆ ಶಾಂತಿಯುತ ವಾತಾವರಣ ಹಾಗೂ ಸೌಹಾರ್ದ ಸಂಬಂಧ ವೃದ್ಧಿಗೆ ಸಹಕಾರಿಯಾಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT