ನವದೆಹಲಿ: ಪಕ್ಷದ ಚಿಹ್ನೆಯನ್ನು (ಬಿಲ್ಲು ಮತ್ತು ಬಾಣ) ತಮ್ಮ ಬಣಕ್ಕೇ ಹಂಚಿಕೆ ಮಾಡಬೇಕು ಎಂದು ಕೋರಿ ಚುನಾವಣಾ ಆಯೋಗಕ್ಕೆ ಶಿವಸೇನಾದ ಏಕನಾಥ ಶಿಂದೆ ಬಣವು ಮನವಿ ಮಾಡಿದೆ.

ಈ ಸಂಬಂಧ ಆಯೋಗಕ್ಕೆ ಶಿಂದೆ ಬಣ ಪತ್ರ ಬರೆದಿದೆ. ‘ತಮ್ಮ ಬಣವೇ ನಿಜವಾದ ಶಿವಸೇನಾ ಪಕ್ಷವಾಗಿದೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹಾಗೂ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನರ್ವೇಕರ್ ಅವರು ತಮ್ಮ ಬಣಕ್ಕೆ ಮಾನ್ಯತೆ ನೀಡಿದ್ದಾರೆ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಶಿವಸೇನಾ, ಬಂಡಾಯ ಶಾಸಕರ ಅರ್ಜಿಗಳಲ್ಲಿ ಸಾಂವಿಧಾನಿಕ ಪ್ರಶ್ನೆಗಳಿವೆ: ಸುಪ್ರೀಂ

ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿವೆ. ಹೀಗಾಗಿ, ಶಿಂದೆ ಬಣದ ಈ ಪತ್ರಕ್ಕೆ ಮಹತ್ವ ಬಂದಿದೆ.

ಪಕ್ಷದ 55 ಶಾಸಕರ ಪೈಕಿ ಕನಿಷ್ಠ 40 ಜನ ಶಾಸಕರು ಬಂಡಾಯ ನಾಯಕ ಶಿಂದೆ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಜೂನ್ 30ರಂದು ಶಿಂದೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

12 ಶಿವಸೇನಾ ಸಂಸದರು ನಮ್ಮ ಜತೆ ಸೇರಿದ್ದಾರೆ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.