ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಂದೆ ರಾಜಕೀಯ ಮಾರ್ಗದರ್ಶಕ ಆನಂದ್ ದಿಘೆ ಜೀವನಾಧರಿತ ಚಿತ್ರ ಬಿಡುಗಡೆಗೆ ಸಜ್ಜು

Published 1 ಜುಲೈ 2024, 2:36 IST
Last Updated 1 ಜುಲೈ 2024, 2:36 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ತಮ್ಮ ರಾಜಕೀಯ ಮಾರ್ಗದರ್ಶಕ ಹಾಗೂ ಶಿವಸೇನಾ ಪಕ್ಷದ ಧೀಮಂತ ನಾಯಕ ದಿವಂಗತ ಆನಂದ್ ದಿಘೆ ಅವರ ಜೀವನಾಧರಿತ ಸಿನಿಮಾ ‘ಧರ್ಮವೀರ್ 2‘ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿದ್ದಾರೆ.

ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವಾಗಲೇ ಈ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆಯನ್ನು ನಡೆಸಲಾಗಿದೆ. ಈ ಚಿತ್ರದಲ್ಲಿ ಏಕನಾಥ ಶಿಂದೆಯ ನಿಜ ಜೀವನದ ಕೆಲವು ಸನ್ನಿವೇಶಗಳನ್ನು ತೆರೆ ಮೇಲೆ ತರಲು ಚಿತ್ರತಂಡ ಸಜ್ಜಾಗಿದೆ.

ಈ ಚಿತ್ರದ ಮೊದಲ ಭಾಗವು 2022ರಲ್ಲಿ ಬಿಡುಗಡೆಯಾಗಿತ್ತು. ಇದೀಗ ಇದರ ಮುಂದುವರಿದ ಭಾಗವಾಗಿ ‘ಧರ್ಮವೀರ್ 2 ‘ ಆಗಸ್ಟ್‌ 9ರಂದು ಮರಾಠಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಶಿಂಧೆ, ‘ಚಿತ್ರದ ಮೂಲಕ ಆನಂದ್ ದಿಘೆ ಅವರು ಅಮರರಾಗುತ್ತಾರೆ. ಅವರ ಜೀವನವು ಜನರಿಗೆ ಸ್ಫೂರ್ತಿಯ ಚಿಲುಮೆಯಾಗಲಿದೆ. ಗುರುವಿನ ಮಾರ್ಗದಲ್ಲಿ ನಡೆಯಲು ಸದಾ ಪ್ರಯತ್ನಿಸುತ್ತೇನೆ‘ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಹೃದಯ ಸ್ತಂಭನದಿಂದಾಗಿ ದಿಘೆ 2001ರಲ್ಲಿ ನಿಧನರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT