ಕಾಸರಗೋಡು: ಬಿಲ್ ಪಾವತಿಸದಿದ್ದಕ್ಕೆ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಕುಪಿತಗೊಂಡ ವ್ಯಕ್ತಿಯೊಬ್ಬ ಏಳು ಟ್ರಾನ್ಸ್ಫಾರ್ಮರ್ಗಳ ಫ್ಯೂಸ್ ಕಿತ್ತ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ ಎಂದು ಕೇರಳ ರಾಜ್ಯ ವಿದ್ಯುತ್ ನಿಗಮ (ಕೆಎಸ್ಇಬಿ) ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
.ಸಂಗತ: ಕಾಸರಗೋಡು ಕನ್ನಡಿಗರ ಅನಾಥಪ್ರಜ್ಞೆ!.
ಶುಕ್ರವಾರ ಸಂಜೆ 6.45ಕ್ಕೆ ಘಟನೆ ನಡೆದಿದ್ದು, ಕಾಸರಗೋಡು ನಗರ ಹಾಗೂ ಸಮೀಪದ ಪ್ರದೇಶಗಳಿಗೆ ಸಮಸ್ಯೆ ಉಂಟಾಗಿದೆ. ಕೂಡಲೇ ವಿದ್ಯುತ್ ಅಡಚಣೆಯಾಗಿರುವ ಬಗ್ಗೆ ಹಲವು ದೂರುಗಳು ಬಂದವು. ನಾವು ಪರಿಶೀಲನೆ ಮಾಡಿದಾಗ ಏನೂ ಸಮಸ್ಯೆ ಕಂಡುಬಂದಿಲ್ಲ ಎಂದು ಕೆಎಸ್ಇಬಿ ಅಧಿಕಾರಿಗಳು ತಿಳಿಸಿದ್ದಾರೆ.

ಬಳಿಕ ಟ್ರಾನ್ಸ್ಫಾರ್ಮರ್ ಅನ್ನು ಪರಿಶೀಲಿಸಿದಾಗ ಫ್ಯೂಸ್ಗಳು ಕಿತ್ತಿರುವುದು ಗೊತ್ತಾಗಿದೆ. ಹುಡುಕಾಟ ನಡೆಸಿದಾಗ ಸಮೀಪದಲ್ಲಿ ಫ್ಯೂಸ್ಗಳು ಪತ್ತೆಯಾಗಿವೆ. ಅವುಗಳಲ್ಲಿ ಕೆಲವು ಹಾನಿಯಾಗಿವೆ. ಹೀಗಾಗಿ ನಾವು ಹೆಚ್ಚುವರಿಯಾಗಿದ್ದ ಫ್ಯೂಸ್ಗಳನ್ನು ಬಳಸಿ ರಾತ್ರಿ 8 ಗಂಟೆಗೆ ವಿದ್ಯುತ್ ಪೂರೈಕೆ ಸುಗಮಗೊಳಿಸಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ.
.ಕಾಸರಗೋಡು ಮೆಡಿಕಲ್ ಕಾಲೇಜಿಗೆ ₹ 56 ಕೋಟಿ ಮಂಜೂರು: ಆರೋಗ್ಯ ಸಚಿವೆ ವೀಣಾ ಜಾರ್ಜ್ .
ವ್ಯಕ್ತಿಯೊಬ್ಬ ಫ್ಯೂಸ್ ಕೀಳುವುನ್ನು ನೋಡಿರುವುದಾಗಿ ಸ್ಥಳೀಯರು ಕೆಎಸ್ಇಬಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಬಿಲ್ ಪಾವತಿಸದ್ದಿದ್ದಕ್ಕೆ ವಿಭಾಗೀಯ ಕಚೇರಿಗೆ ಈ ಹಿಂದೆ ಬಂದು ಗಲಾಟೆ ಮಾಡಿದ್ದ ನೆಲ್ಲಿಕುಝಿ ವಿಭಾದ ವ್ಯಕ್ತಿಯ ಕೃತ್ಯ ಇದಾಗಿರಬಹುದು ಎನ್ನುವ ಶಂಕೆ ಮೂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮಾಹಿತಿ ಅಧರಿಸಿ ಶಂಕಿತ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ತನಗೆ ವಯಸ್ಸಾದ ತಂದೆ ಇದ್ದಾರೆಂದೂ, ತಾನು ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ ಎಂದೂ ಆತ ವಿಚಾರಣೆ ವೇಳೆ ಹೇಳಿದ್ದಾನೆ.
.ಕಾಸರಗೋಡು | ಸರ್ಕಾರಿ ನೌಕರ ಸೇರಿ 14 ಜನರಿಂದ ಬಾಲಕನಿಗೆ ಲೈಂಗಿಕ ದೌರ್ಜನ್ಯ: ಬಂಧನ.
ಕೆಎಸ್ಇಬಿ ಅಧಿಕಾರಿಗಳು ದೂರು ಕೊಟ್ಟರೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಶನಿವಾರ ದೂರು ಕೊಡುತ್ತೇವೆ. ಹಲವಾರು ಫ್ಯೂಸ್ಗಳು ಹಾನಿಯಾಗಿವೆ. ಘಟನೆಯಿಂದಾಗಿ ಒಂದು ಗಂಟೆಗೂ ಅಧಿಕ ಹೊತ್ತು ವಿದ್ಯುತ್ ಸ್ಥಗಿತಗೊಂಡಿದೆ ಎಂದು ಕೆಎಸ್ಇಬಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.