ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ಆನೆ ಬಾವಿಗೆ ಬಿದ್ದು ಸಾವು

Published 24 ಏಪ್ರಿಲ್ 2024, 0:08 IST
Last Updated 24 ಏಪ್ರಿಲ್ 2024, 0:08 IST
ಅಕ್ಷರ ಗಾತ್ರ

ತ್ರಿಶ್ಶೂರ್ (ಕೇರಳ): ಜಿಲ್ಲೆಯ ಅರಣ್ಯದಿಂದ 200 ಮೀಟರ್ ದೂರದಲ್ಲಿರುವ ಖಾಸಗಿ ಜಮೀನಿನಲ್ಲಿದ್ದ ಬಾವಿಗೆ ಗಂಡು ಕಾಡಾನೆಯೊಂದು ಬಿದ್ದು, ಮೃತಪಟ್ಟಿದೆ.

ಆನೆಯು ಬಾವಿಗೆ ಬಿದ್ದಿರುವ ಮಾಹಿತಿ ಸೋಮವಾರ ಮಧ್ಯರಾತ್ರಿ ಲಭ್ಯವಾಗಿದ್ದು, ಪಶು ವೈದ್ಯಾಧಿಕಾರಿಗಳು ಸೇರಿದಂತೆ ತಂಡವು ಸ್ಥಳಕ್ಕೆ ಧಾವಿಸಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯಾಧಿಕಾರಿಗಳ ತಂಡವು ತಕ್ಷಣವೇ ಮಣ್ಣಿನ ಅಗೆಯುವ ಯಂತ್ರವನ್ನು ಬಳಸಿಕೊಂಡು, ಆನೆಯನ್ನು ಬಾವಿಯಿಂದ ಹೊರಬರಲು ಮಾರ್ಗವನ್ನು ಸೃಷ್ಟಿಸುವ ಮೂಲಕ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಎಂದು ಅವರು ಹೇಳಿದರು. ಆದರೆ, ಕಾರ್ಯಾಚರಣೆ ಪೂರ್ಣಗೊಳ್ಳುವ ಮೊದಲೇ ಆನೆ ಮೃತಪಟ್ಟಿದೆ.

ಅರಣ್ಯಾಧಿಕಾರಿಗಳು ಆನೆಯ ಮೃತ ದೇಹವನ್ನು ಹೊರತೆಗೆಯುವ ಕಾರ್ಯದಲ್ಲಿ ತೊಡಗಿದ್ದು, ನಂತರ ಪರೀಕ್ಷೆ ನಡೆಸಿ ಸಾವಿಗೆ ನಿಖರ ಕಾರಣ ತಿಳಿಯಲು ಪರಿಶೀಲನೆ ನಡೆಸಲಾಗುವುದು ಎಂದರು.

ತ್ರಿಶ್ಶೂರ್‌ನಲ್ಲಿ ಈ ರೀತಿ ಘಟನೆಗಳು ನೆಡೆಯುವುದು ಅಪರೂಪ. ಇತ್ತೀಚೆಗೆ ಕೇರಳದಲ್ಲಿ ಕಾಡಾನೆಗಳು ಬಾವಿಗೆ ಬೀಳುತ್ತಿರುವ ವರದಿ ಹೆಚ್ಚು ದಾಖಲಾಗುತ್ತಿದ್ದು, ಪ್ರತಿ ಬಾರಿಯೂ ಆನೆಗಳನ್ನು ರಕ್ಷಿಸಲಾಗಿತ್ತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT