ಲಖನೌ: ಉತ್ತರಪ್ರದೇಶದಲ್ಲಿ ಬಿಜೆಪಿಯ ಲೆಕ್ಕಾಚಾರಗಳು ಬುಡಮೇಲಾಗಿದ್ದು, ಶೇ 90ರಷ್ಟು ದಲಿತ, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಒಗ್ಗಟ್ಟಾಗಿ ಪಿಡಿಎಗೆ ಮತ ನೀಡಲಿದ್ದಾರೆ ಎಂದು ಸಮೀಕ್ಷೆ ಹೇಳಿರುವುದಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ತಿಳಿಸಿದರು.
ಪಿಚ್ಡೆ (ಹಿಂದುಳಿದ), ದಲಿತ ಮತ್ತು ಅಲ್ಪಸಂಖ್ಯಾತರನ್ನು ಅಖಿಲೇಶ್ ಅವರು ಪಿಡಿಎ ಎಂದು ಕರೆದಿದ್ದಾರೆ.
ಬೆಜೆಪಿಯು ಅಭ್ಯರ್ಥಿಗಳ ಆಯ್ಕೆಯಲ್ಲಿ ತೀರಾ ಹಿಂದುಳಿದಿದೆ. ಸೋಲಲು ಬಯಸದ ಕಾರಣ ಯಾರೂ ಅಭ್ಯರ್ಥಿಯಾಗಲು ಮುಂದೆ ಬರುತ್ತಿಲ್ಲ ಎಂದು ಲೇವಡಿ ಮಾಡಿದರು.