ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಇಂಗ್ಲಿಷ್ ಭಾಷೆ ಬ್ರಿಟಿಷರು ಬಿಟ್ಟು ಹೋದ ರೋಗ': ವೆಂಕಯ್ಯ ನಾಯ್ಡು

Last Updated 15 ಸೆಪ್ಟೆಂಬರ್ 2018, 1:36 IST
ಅಕ್ಷರ ಗಾತ್ರ

ನವದೆಹಲಿ: ಬ್ರಿಟಿಷರು ಬಿಟ್ಟು ಹೋದ ರೋಗ ಇಂಗ್ಲಿಷ್ ಭಾಷೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಶುಕ್ರವಾರ ಹಿಂದಿ ದಿವಸ್ ಅಂಗವಾಗಿ ನವದೆಹಲಿಯ ವಿಗ್ಯಾನ್ ಭವನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ಹಿಂದಿ ಭಾಷೆಯು ಭಾರತದಲ್ಲಿ ಸಾಮಾಜಿಕ, ರಾಜಕೀಯ ಮತ್ತು ಭಾಷಾ ಐಕ್ಯತೆಯ ಪ್ರತೀಕ ಎಂದಿದ್ದಾರೆ.

ಯೇ ಬಿಮಾರಿಜೊ ಅಂಗ್ರೇಜಿ ವಾಲಾ ಜೋಡ್ ಕರ್ ಗಯಾ, ಇಸ್ ಬಿಮಾರಿ ಸೇ ಹಮೇ ಮುಕ್ತ್ ಕರ್ನಾ ಚಾಹಿಯೆ (ಬ್ರಿಟಿಷರು ಬಿಟ್ಟು ಹೋದ ಈ ರೋಗದಿಂದ ನಾವು ಮುಕ್ತರಾಗಬೇಕಿದೆ) ಎಂದು ನಾಯ್ಡು ಹೇಳಿದ್ದಾರೆ.

ಸಂವಿಧಾನ ಸಭೆಯು ಹಿಂದಿ ಭಾಷೆಯನ್ನು ಸೆಪ್ಟೆಂಬರ್ 14, 1949ರಲ್ಲಿ ದೇಶದ ಅಧಿಕೃತ ಭಾಷೆ ಎಂದು ಪರಿಗಣಿಸಿದೆ. ಆದರೆ ನೀವು ಸಂವಿಧಾನ ಸಭೆಯ ಆಶಯವನ್ನು ನೆರವೇರಿಸಿದ್ದೀರಾ? ಎಂದು ನಾಯ್ಡು ಪ್ರಶ್ನಿಸಿದ್ದಾರೆ.
ವಿಷಯ ಏನು ಅಂದರೆ, ಅದೇ ಸಭೆಯು ಇಂಗ್ಲಿಷ್ ಭಾಷೆಯನ್ನು ಕೂಡಾ ಅಧಿಕೃತ ಭಾಷೆಯನ್ನಾಗಿ ಮಾಡಿದೆ.

ಯಾವುದೇ ರಾಜ್ಯಕ್ಕೆ ಭೇಟಿ ನೀಡಿದರೂ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಭಾಷಣ ಮಾಡುವ ಮುನ್ನ ನಾಯ್ಡುಅವರು ಅಲ್ಲಿನ ಸ್ಥಳೀಯ ಭಾಷೆಯನ್ನುಮಾತನಾಡುತ್ತಾರೆ.

ನಾವು ನಮ್ಮ ಮಾತೃಭಾಷೆಗೆ ಪ್ರೋತ್ಸಾಹ ಕೊಡಬೇಕು. ಭಾಷೆ ಮತ್ತು ಭಾವನೆಗಳು ಒಟ್ಟೊಟ್ಟಿಗೆ ಸಾಗಬೇಕು.ನೀವು ಜನರಲ್ಲಿಗೆ ತಲುಪಬೇಕು ಎಂದಾದರೆ ಅವರನ್ನು ಅರ್ಥ ಮಾಡಿಕೊಳ್ಳಬೇಕು.ಹಾಗಾದರೆ ಮಾತ್ರ ನಿಮಗೆ ನಿಮ್ಮ ಭಾವನೆಗಳನ್ನು ವ್ಯಕ್ತ ಪಡಿಸಲು ಸಾಧ್ಯ. ಮಾತೃಭಾಷೆಯಲ್ಲಿ ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸುವುದು ಸುಲಭ.ಇದು ಎಲ್ಲರ ಅನುಭವವೂ ಆಗಿದೆ. ಆದ್ದರಿಂದಎಲ್ಲರೂ ಅವರವರ ಮನೆಯಲ್ಲಿ ಮಾತೃಭಾಷೆಯನ್ನೇ ಮಾತನಾಡಬೇಕು.
ಸಂಸ್ಕೃತ ಎಲ್ಲ ಭಾಷೆಗಳ ತಾಯಿ, ಅದೇ ವೇಳೆ ಶಕ್ತಿಶಾಲಿಯಾದ ಹಲವಾರು ಸ್ಥಳೀಯ ಭಾಷೆಗಳು ಇವೆ ಎಂದು ನಾಯ್ಡು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT