ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ– ವನ್ಯಜೀವಿ ಸಂಘರ್ಷ ಹೆಚ್ಚಳ: ಕೇರಳ ಸರ್ಕಾರ ಟೀಕಿಸಿದ ಪರಿಸರ ಸಚಿವ

ಖುದ್ದು ಪರಿಶೀಲಿಸಲಿರುವ ಭೂಪೇಂದರ್‌ ಯಾದವ್‌
Published 21 ಫೆಬ್ರುವರಿ 2024, 15:57 IST
Last Updated 21 ಫೆಬ್ರುವರಿ 2024, 15:57 IST
ಅಕ್ಷರ ಗಾತ್ರ

ನವದೆಹಲಿ: ‘ಕೇರಳ ಸರ್ಕಾರ ಮತ್ತು ಸ್ಥಳೀಯ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ವಯನಾಡ್‌ ಜಿಲ್ಲೆಯಲ್ಲಿ ಮಾನವ– ವನ್ಯಜೀವಿ ನಡುವಿನ ಸಂಘರ್ಷ ಹೆಚ್ಚಳವಾಗಿದೆ’ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್‌ ಯಾದವ್‌ ಅವರು ಬುಧವಾರ ಆರೋಪಿಸಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಬರೆದುಕೊಂಡಿರುವ ಯಾದವ್‌ ಅವರು, ‘ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ತಜ್ಞರು ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಯ ತಜ್ಞರ ತಂಡದೊಂದಿಗೆ ನಾನು ಈಗ ವಯನಾಡ್‌ಗೆ ತೆರಳುತ್ತಿದ್ದೇನೆ. ಆ ಪ್ರದೇಶದಲ್ಲಿನ ಪರಿಸ್ಥಿತಿ ಅವಲೋಕಿಸಿ, ಸಂತ್ರಸ್ತರನ್ನು ಭೇಟಿಯಾಗಲಿದ್ದೇನೆ’ ಎಂದಿದ್ದಾರೆ.

‘ಸಂಘರ್ಷದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರ ಪರವಾಗಿ ನಾವು ನಿಲ್ಲ‌ಲಿದ್ದೇವೆ. ಅಲ್ಲದೇ ಅವರಿಗೆ ಶೀಘ್ರದಲ್ಲೇ ಪರಿಹಾರ ದೊರಕಿಸುವ ಬಗ್ಗೆಯೂ ಖಚಿತಪಡಿಸಿಕೊಳ್ಳಲಾಗುವುದು’ ಎಂದೂ ಅವರು ಹೇಳಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಯಾದವ್‌, ‘ಕೇರಳದ ರಾಜ್ಯ ಸರ್ಕಾರ ಮತ್ತು ಸಂಸದರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಕೇಂದ್ರ ಸರ್ಕಾರವು ನಿಧಿಯನ್ನು, ಸಲಹೆಗಳನ್ನು (ಮಾನವ– ವನ್ಯಜೀವಿ ಸಂಘರ್ಷಗಳನ್ನು ಪರಿಹರಿಸಲು) ನೀಡುತ್ತಿದೆ. ಪ್ರಾಣಿಗಳ ಬಗ್ಗೆ ಸಹಾನುಭೂತಿಯನ್ನು ಹೊಂದಿರುವಂತೆಯೇ ಇಂಥ ಸಂಘರ್ಷಗಳನ್ನು ತಡೆಯಲು ನಾವು ತಂತ್ರಜ್ಞಾನವನ್ನು ಜಾಗರೂಕತೆಯಿಂದ ಬಳಸಬೇಕಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರವು ಹಲವು ಬಾರಿ ರಾಜ್ಯಗಳಿಗೆ ಸಲಹೆಗಳನ್ನು ನೀಡಿದೆ’ ಎಂದು ತಿಳಿಸಿದರು.

ಪ್ರತಿಭಟನೆ: ಲಾಠಿ ಚಾರ್ಜ್‌

ವಯನಾಡು: ಮಾನವ–ಪ್ರಾಣಿ ಸಂಘರ್ಷ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಯುವ ಮೋರ್ಚಾ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬ್ಯಾರಿಕೇಡ್‌ಗಳನ್ನು ದಾಟಿಕೊಂಡು ಮುಂದಕ್ಕೆ ಸಾಗಲು ಯತ್ನಿಸಿದಾಗ ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದರು. ಜಲಫಿರಂಗಿಗಳನ್ನೂ ಪ್ರಯೋಗಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT