ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರ ನಿರ್ಮಾಣವಾದರೂ, ಕಾಂಗ್ರೆಸ್ ದ್ವೇಷದ ಹಾದಿ ಬಿಡುತ್ತಿಲ್ಲ: ಪ್ರಧಾನಿ

Published 22 ಫೆಬ್ರುವರಿ 2024, 11:08 IST
Last Updated 22 ಫೆಬ್ರುವರಿ 2024, 11:08 IST
ಅಕ್ಷರ ಗಾತ್ರ

ಮೆಹ್ಸಾನಾ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಳಿಕವೂ ನಕಾರಾತ್ಮಕ ಚಿಂತನೆಯುಳ್ಳ ಕಾಂಗ್ರೆಸ್ ನಾಯಕರು ದ್ವೇಷದ ಹಾದಿಯನ್ನು ತೊರೆಯಲು ಸಿದ್ಧರಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

‘ಇದೇ ಜನರು (ಕಾಂಗ್ರೆಸ್‌ ನಾಯಕರು) ರಾಮನ ಅಸ್ತಿತ್ವದ ಕುರಿತು ಪ್ರಶ್ನಿಸಿದ್ದರು. ಅಲ್ಲದೆ, ರಾಮ ಮಂದಿರ ನಿರ್ಮಾಣಕ್ಕೆ ಅಡಚಣೆ ಸೃಷ್ಟಿಸಿದ್ದರು. ಇಂದು ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಗೊಳಿಸಿರುವುದಕ್ಕೆ ಇಡೀ ದೇಶವೇ ಸಂತೋಷ ಪಡುತ್ತಿದೆ. ಆದರೆ, ನಕಾರಾತ್ಮವಾಗಿ ಜೀವಿಸುತ್ತಿರುವವರು ತಮ್ಮ ದ್ವೇಷದ ಹಾದಿಯನ್ನು ಬಿಡುತ್ತಿಲ್ಲ’ ಎಂದು ಮೋದಿ ಹೇಳಿದ್ದಾರೆ.

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ತರಭ್‌ನಲ್ಲಿ ವಾಲಿನಾಥ್‌ ಮಹಾದೇವ ದೇವಸ್ಥಾನವನ್ನು ಉದ್ಘಾಟಿಸಿ, ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೇವರ ಕೆಲಸ ಮತ್ತು ದೇಶದ ಕೆಲಸ ಅತ್ಯಂತ ವೇಗವಾಗಿ ನಡೆಯುತ್ತಿರುವ ಸಮಯ ಇದಾಗಿದೆ. ಒಂದೆಡೆ ದೇಶದಲ್ಲಿ ದೇವಸ್ಥಾನಗಳು ನಿರ್ಮಾಣಗೊಳ್ಳುತ್ತಿವೆ. ಇನ್ನೊಂದೆಡೆ ಬಡವರಿಗಾಗಿ ಲಕ್ಷಗಟ್ಟಲೆ ಮನೆಗಳು ನಿರ್ಮಾಣಗೊಳ್ಳುತ್ತಿವೆ’ ಎಂದು ತಿಳಿಸಿದ್ದಾರೆ.

ಸುಮಾರು ₹8,350 ಕೋಟಿಗೂ ಹೆಚ್ಚು ವೆಚ್ಚದ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೇರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT