ನವದೆಹಲಿ: ‘ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ರೈತನೂ ಸತ್ಯಾಗ್ರಹಿಯೇ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಬಣ್ಣಿಸಿದ್ದಾರೆ.

‘ಈ ರೈತರಿಗೆ ಅವರ ಹಕ್ಕುಗಳು ಮರಳಿ ಸಿಗುತ್ತವೆ. ದೇಶದಲ್ಲಿ ಈಗ ಚಂಪಾರಣ್ ಸತ್ಯಾಗ್ರಹ ಮಾದರಿ ಹೋರಾಟ ನಡೆದಿದೆ. ಅಂದು ಬ್ರಿಟೀಷರು ಕಂಪನಿಗಳಿಗೆ ಬೆನ್ನೆಲುಬಾಗಿದ್ದರು, ಈಗ ಮೋದಿ ಮತ್ತು ಗೆಳೆಯರು ‘ಕಂಪನಿ ಬಹಾದ್ದೂರ್’ಗಳಾಗಿದ್ದಾರೆ’ ಎಂದು ಈ ಕುರಿತು ಮಾಡಿರುವ ಟ್ವೀಟ್‌ನಲ್ಲಿ ರಾಹುಲ್ ಗಾಂಧಿ ಟೀಕಿಸಿದ್ದಾರೆ.

1917ರಲ್ಲಿ ನಡೆದಿದ್ದ ಚಂಪಾರಣ್ ಸತ್ಯಾಗ್ರಹವು ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ್ದಾಗಿತ್ತು. ಇದರ ನೇತೃತ್ವವನ್ನು ಮಹಾತ್ಮಗಾಂಧಿ ವಹಿಸಿದ್ದರು. ಕೃಷಿ ಸಮಸ್ಯೆಗಳಿಗೆ ಸಂಬಂಧಿಸಿದ ಹೋರಾಟ ಬಿಹಾರದ ಚಂಪಾರಣ್‌ನಲ್ಲಿ ಆರಂಭವಾಗಿತ್ತು.

ಹಾಲಿ ನಡೆಯುತ್ತಿರುವ ಕೃಷಿಕರ ಹೋರಾಟವನ್ನು ಬೆಂಬಲಿಸಿರುವ ಕಾಂಗ್ರೆಸ್, ಕೃಷಿ ತಿದ್ದುಪಡಿಯ ಮೂರು ಕಾಯ್ದೆಗಳನ್ನು ರದ್ದುಪಡಿಸಲು ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.