ನವದೆಹಲಿ: ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಭಾರತದ ಸೈನಿಕರನ್ನು ಚೀನಾ ಹತ್ಯೆ ಮಾಡಿರುವುದನ್ನು ಖಂಡಿಸಿ ಇಲ್ಲಿನ ಚೀನಾ ರಾಯಭಾರ ಕಚೇರಿ ಎದುರು ಬುಧವಾರ ಮಾಜಿ ಸೈನಿಕರ ಗುಂಪೊಂದು ಪ್ರತಿಭಟನೆ ನಡೆಸಿತು.

‘ಹುತಾತ್ಮರ ಕ್ಷೇಮಾಭಿವೃದ್ಧಿ ಒಕ್ಕೂಟ’ದ ಹೆಸರಿನಡಿ ಆರೇಳು ಮಾಜಿ ಯೋಧರಿದ್ದ ಗುಂಪು ಪ್ರತಿಭಟನೆ ನಡೆಸಿತು. ‘ರಾಯಭಾರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಬಾರದು ಎಂದು ಮನವಿ ಮಾಡಿದ ಸಂದರ್ಭದಲ್ಲಿ ಮಾಜಿ ಸೈನಿಕರು ಸ್ಥಳದಿಂದ ತೆರಳಿದರು’ ಎಂದುಹೆಚ್ಚುವರಿ ಉಪಪೊಲೀಸ್ ಆಯುಕ್ತ ದೀಪಕ್ ಯಾದವ್ ತಿಳಿಸಿದರು.

ಬಂಧನ: ಚೀನಾ ದಾಳಿ ಖಂಡಿಸಿ ತೀನ್ ಮೂರ್ತಿ ವೃತ್ತದಲ್ಲಿ ಸ್ವದೇಶಿ ಜಾಗರಣ್ ಮಂಚ್‌ನ 10 ಸದಸ್ಯರಿದ್ದ ಗುಂಪು ಪ್ರತಿಭಟನೆ ನಡೆಸಿತು. ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.