ರಾಕೇಶ್ ಶರ್ಮಾ ಹಿಂದಿಕ್ಕಿ ಶುಭಾಂಶು ಸಾಧನೆ
ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ಅವಧಿ ಕಾಲ ಕಳೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಶುಭಾಂಶು ಶುಕ್ಲಾ ಅವರು ಪಾತ್ರರಾಗಿದ್ದಾರೆ. ಈ ಮೂಲಕ ಗಗನಯಾನಿ ರಾಕೇಶ್ ಶರ್ಮಾ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ರಾಕೇಶ್ ಅವರು ಏಳು ದಿನ 21 ಗಂಟೆ ಮತ್ತು 40 ನಿಮಿಷ ಬಾಹ್ಯಾಕಾಶದಲ್ಲಿ ಇದ್ದರು. ಶುಕ್ಲಾ ಅವರು ಬಾಹ್ಯಾಕಾಶದಲ್ಲಿ ಈಗಾಗಲೇ 10 ದಿನ ಕಳೆದಿದ್ದಾರೆ.