ನವದೆಹಲಿ: ಭಾರತ ಕೋವಿಡ್–19 ಸೋಂಕಿನ ಎರಡನೇ ಅಲೆಯಿಂದ ಚೇತರಿಸಿಕೊಳ್ಳುತ್ತಿದ್ದು, ಹೆಚ್ಚು ಜನರಿಗೆ ಲಸಿಕೆ ಹಾಕಿಸಲು ಕೇಂದ್ರ ಸರ್ಕಾರ ಸತತ ಪ್ರಯತ್ನಗಳನ್ನು ಮಾಡುತ್ತಿದೆ. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ಆದರೆ, ವಿವಿಧ ಕೋವಿಡ್ ಲಸಿಕೆಗಳ ನಡುವೆ ಬೆಲೆ ವ್ಯತ್ಯಾಸಗಳಿವೆ. ಸೇವಾ ಶುಲ್ಕ ಪರಿಷ್ಕರಣೆ (₹150 + ಶೇ 5 ಜಿಎಸ್‌ಟಿ ಸೇರಿ) ಕೋವಿಶೀಲ್ಡ್ ಒಂದು ಡೋಸ್‌ಗೆ ₹780, ಕೊವ್ಯಾಕ್ಸಿನ್ – ₹1,410 ಇದ್ದರೆ ಸ್ಪುಟ್ನಿಕ್ ವಿ – ₹1,145 ರಷ್ಟಿದೆ.

ಕೋವಾಕ್ಸಿನ್ ಬೆಲೆ ಏಕೆ ಹೆಚ್ಚು?
ಕೋವಾಕ್ಸಿನ್‌ನ ತಂತ್ರಜ್ಞಾನವು ಹೆಚ್ಚಿನ ವೆಚ್ಚವನ್ನು ಒಳಗೊಂಡಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

‘ಕೋವಾಕ್ಸಿನ್ ಲಸಿಕೆಯ ಉತ್ಪಾದನಾ ವೆಚ್ಚ ಹಾಗೂ ಬಳಸುವ ತಂತ್ರಜ್ಞಾನವು ಕೋವಿಶೀಲ್ಡ್ ಮತ್ತು ಸ್ಪುಟ್ನಿಕ್ ವಿಗಿಂತ ಬಹಳ ಭಿನ್ನವಾಗಿದೆ’ ಎಂದು ಜೀವಶಾಸ್ತ್ರ ಕೇಂದ್ರದ ಸಲಹೆಗಾರ ಡಾ.ರಾಕೇಶ್ ಮಿಶ್ರಾ ಹೇಳಿದ್ದಾರೆ.

‘ಕೋವಿಶೀಲ್ಡ್ ಲಸಿಕೆ ತಯಾರಿಕೆಗೆ ತಗುಲುವ ವೆಚ್ಚವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ, ಕೋವಿಶೀಲ್ಡ್ ಮತ್ತು ಸ್ಪುಟ್ನಿಕ್ ವಿ ಲಸಿಕೆ ದರ ವಾಣಿಜ್ಯ ಕಾರಣಗಳನ್ನು ಹೊಂದಿರಬಹುದು. ವಿಸ್ತಾರವಾದ ಸೌಲಭ್ಯದ ಅಗತ್ಯವಿಲ್ಲ’ ಎಂದು ಡಾ.ಮಿಶ್ರಾ ಹೇಳಿದರು.

ಕಳೆದ ವರ್ಷದಲ್ಲಿ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆಗಳಿಗೆ ವಿಧಿಸಲಾಗುವ ದರಕ್ಕಿಂತ ಈಗ ವಿಶ್ವದಾದ್ಯಂತ ಬಳಕೆಯಲ್ಲಿರುವ ಲಸಿಕೆಗಳ ಬೆಲೆ ತೀರಾ ಕಡಿಮೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ... Explainer: ಕೋವಿಡ್ ಲಸಿಕೆ ಡೋಸ್ ಅಂತರ, ಬೆಲೆ, ಕೇಂದ್ರ, ಮತ್ತಷ್ಟು ಮಾಹಿತಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.